ಬೆಂಗಳೂರು:ಬಿಟ್ ಕಾಯಿನ್ ಹಗರಣ (bitcoin Scam) ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವ ಕಾಂಗ್ರೆಸ್ ಬೇಡಿಕೆಯನ್ನು ಬಿಜೆಪಿ ಟೀಕಿಸಿದೆ. ಇದು ಸಿಂಪಲ್ ಐಪಿಸಿ ಕೇಸ್ ಅಲ್ಲ, ನೂರಾರು ಜನ ಸಾಫ್ಟ್‌ವೇರ್ ಇಂಜಿನಿಯರ್ಗಳು ಕೆಲಸ ಮಾಡುವ ಪ್ರತಿಷ್ಠಿತ ಕಂಪನಿಗಳ ಪಾಸ್ವರ್ಡ್ ಹ್ಯಾಕ್ ಮಾಡುವ ಶ್ರೀಕಿ ಕೇಸ್ ತನಿಖೆ ನಡೆಸಲು ನ್ಯಾಯಾಂಗ ತನಿಖೆಯಿಂದ ಸಾಧ್ಯವಿಲ್ಲ ಎಂಬ ಕಾಂಗ್ರೆಸ್ ಬೇಡಿಕೆಗೆ ಬಿಜೆಪಿ(BJP) ತಿರುಗೇಟು ನೀಡಿದೆ.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಬಿಜೆಪಿ ವಕ್ತಾರ ಪಿ.ರಾಜೀವ್(P rajeev), ಪೊಲೀಸ್ ಇಲಾಖೆಗೆ ಇಂತಹ ಹ್ಯಾಕರ್ಸ್ ಇಂಟ್ರಾಗೇಟ್ ಮಾಡಲು ತರಬೇತಿ ನೀಡಿಲ್ಲ. ಹಾಗಾಗಿ ನಮ್ಮ ಪೊಲೀಸರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಇ-ಗವರ್ನೆನ್ಸ್ ಸೈಬರ್ ತಜ್ಞರ ಸಂಸ್ಥೆ, ಸೈಬರ್ ಐಟಿ ಟೆಕ್ನಾಲಜಿ ಸಂಸ್ಥೆ, ಎನ್‌ಸಿಬಿ, ಎನ್‌ಐಎ, ವಾಣಿಜ್ಯ ತೆರಿಗೆ ಇಲಾಖೆ, ದೆಹಲಿ ಪೊಲೀಸ್, ಒಡಿಶಾ ಪೊಲೀಸ್, ಚೆನ್ನೈ ಪೊಲೀಸ್, ಹಲವಾರು ಸಂಸ್ಥೆಗಳಲ್ಲಿ ತಜ್ಞರಾಗಿದ್ದವರ ಸಹಕಾರ ತೆಗೆದುಕೊಂಡಿದ್ದಾರೆ. ಈ ತನಿಖೆ ಮಾಡುವುದು ಅಷ್ಟು ಸುಲಭವಲ್ಲ ಎಂದರು.
ಸಿದ್ದುಗೆ ಪಿ ರಾಜೀವ್ ಟಾಂಗ್
ಈಗ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಲಾಗುತ್ತಿದೆ. ಎಲ್ಲ ಸಂಸ್ಥೆಗಳ ಉದ್ದೇಶ ಸತ್ಯ ಹೊರಗೆ ತೆಗೆಯುವುದು ಎನ್ನುವುದೇ ಆಗಿದೆ. ನ್ಯಾಯಾಂಗ ತನಿಖೆಯಿಂದ ಸತ್ಯ ಹೊರಬರುವುದಾದರೆ ನನ್ನದೇನು ಅಭ್ಯಂತರವಿಲ್ಲ, ಆದರೆ, ನ್ಯಾಯಾಂಗ ತನಿಖೆ ಮಾಡಲು ಅಷ್ಟು ಇಕ್ವಿಪ್ಟೆಂಟ್ ಇದೆಯಾ? ಇದು ಸಿಂಪಲ್ ಐಪಿಸಿ ಕೇಸ್ ಅಲ್ಲ. ಭಾರತೀಯ ದಂಡ ಸಂಹಿತೆಯ ಅಪರಾಧಗಳ ಅಡಿ ಬರುವ ಪ್ರಕರಣವಲ್ಲ ಎಂದು ಪ್ರತಿಪಕ್ಷ ಸಿದ್ದರಾಮಯ್ಯಗೆ(Siddaramaiah) ಬೇಡಿಕೆಗೆ ಟಾಂಗ್ ನೀಡಿದ್ದಾರೆ.
ಇ - ಪ್ರಕ್ಯೂರ್ಮೆಂಟ್ ಹ್ಯಾಕ್ ಮಾಡುತ್ತಾರೆ ಎಂದರೆ?