ಬೆಂಗಳೂರು:ಈ ಬಾರಿ 8 ಲಕ್ಷ 75 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವವರಿದ್ದರು. ಕೆಲ ಸಮೀಕ್ಷೆಗಳಲ್ಲಿ ಪರೀಕ್ಷೆ ಬೇಡ ಅನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ, ಎಸ್ಎಸ್ಎಲ್ಸಿಗೆ ಪರೀಕ್ಷೆ ನಡೆಸದೇ ಇರುವುದು ಸಾಧ್ಯವಿಲ್ಲ. ಎಸ್ಎಸ್ಎಲ್ಸಿ ಮಕ್ಕಳನ್ನು ಕಳೆದ ವರ್ಷದ ಶೈಕ್ಷಣಿಕ ಪ್ರಗತಿ ಆಧಾರದ ಮೇಲೆ ಪಾಸ್ ಮಾಡೋಣವೆಂದರೆ ಕಳೆದ ಬಾರಿ 9ನೇ ತರಗತಿ ಪರೀಕ್ಷೆಯೂ ನಡೆದಿಲ್ಲ. ಆದ್ದರಿಂದ ಈ ಬಾರಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
SSLC ಪರೀಕ್ಷೆ ಹೀಗೆ ನಡೆಯುತ್ತದೆ..
- ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಎರಡೇ ಪ್ರಶ್ನೆ ಪತ್ರಿಕೆಗಳ ಮೂಲಕ ನಡೆಸಲಾಗುವುದು.
- ಒಟ್ಟು 6 ವಿಷಯಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗುವುದು. ಎರಡೇ ಪ್ರಶ್ನೆ ಪತ್ರಿಕೆಗಳನ್ನು ತೆಗೆಯಲಾಗುವುದು.
- ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಈ ಮೂರು ವಿಷಯಗಳನ್ನು ಸೇರಿಸಿ ಒಂದು ಪೇಪರ್
- ಇನ್ನೊಂದು ಪತ್ರಿಕೆಯಲ್ಲಿ ಭಾಷಾ ವಿಷಯಗಳು ಇರಲಿವೆ.
- ಬಹು ಆಯ್ಕೆ ಪ್ರಶ್ನೆಗಳನ್ನು(Multiple choice questions) ಕೇಳಲಾಗುವುದು.
- ಸರಳ ಹಾಗೂ ನೇರ ಪ್ರಶ್ನೆಗಳಿರಲಿವೆ.
- ಗ್ರೇಡ್ ಆಧಾರಿತ ಫಲಿತಾಂಶ. A, A+ ಮಾದರಿಯಲ್ಲಿ ಗ್ರೇಡ್ ವ್ಯವಸ್ಥೆ ಇರಲಿದೆ.