ಕರ್ನಾಟಕ

karnataka

ETV Bharat / state

ಕೊರೊನಾಗೆ ಖಾಕಿ ಕುಗ್ಗಿಲ್ಲ, ಕುಗ್ಗೋದಿಲ್ಲ.. ಧೈರ್ಯದಿಂದ ಕರ್ತವ್ಯ ನಿರ್ವಹಿಸ್ತಿದ್ದಾರೆ.. ಆಯುಕ್ತ ಭಾಸ್ಕರ್‌ ರಾವ್

ಕೊರೊನಾ ವಾರಿಯರ್ಸ್​ಗೆ ಸರ್ಕಾರ ಬಹಳಷ್ಟು ಸೌಲಭ್ಯ ನೀಡುತ್ತಿದೆ. ಪೊಲೀಸರಲ್ಲಿ ಕೊರೊನಾ ಸೋಂಕು ಬಂದ ಕಾರಣ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬೊಮ್ಮಾಯಿ ಅವರೆಲ್ಲರೂ ಧೈರ್ಯ ತುಂಬಿದ್ದಾರೆ. ಯಾರೂ ಕೂಡ ಭಯಪಡುವ ಅವಶ್ಯಕತೆ ಇಲ್ಲ..

Special chit chat
ಆಯುಕ್ತ ಭಾಸ್ಕರ್ ರಾವ್

By

Published : Jun 17, 2020, 8:32 PM IST

ಬೆಂಗಳೂರು :ನಗರದ ಪೊಲೀಸರಲ್ಲಿ ಕೊರೊನಾ ಪತ್ತೆಯಾಗುತ್ತಿರುವ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಈಟಿವಿ ಭಾರತದೊಂದಿಗೆ ಮಾತುಕತೆ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ನಗರದಲ್ಲಿ ನಿನ್ನೆಯವರೆಗೂ 14 ಪ್ರಕರಣ ಪತ್ತೆಯಾಗಿತ್ತು. ಆದರೆ, ಇದೀಗ ಪೊಲೀಸರಲ್ಲಿ 23 ಪ್ರಕರಣ ಪತ್ತೆಯಾಗಿವೆ. ಈ ಕುರಿತು ಪೊಲೀಸರು ಭಯ ಪಡುವ ಅವಶ್ಯಕತೆ ಇಲ್ಲ. ನಾವು ಎಲ್ಲಾ ರೀತಿಯ ಜವಾಬ್ದಾರಿ ತೆಗುದುಕೊಂಡಿದ್ದೇವೆ ಎಂದಿದ್ದಾರೆ.

ಈಟಿವಿ ಭಾರತದೊಂದಿಗೆ ಮಾತುಕತೆ ನಡೆಸಿದ ಆಯುಕ್ತ ಭಾಸ್ಕರ್ ರಾವ್

ಪೊಲೀಸ್ ಕ್ವಾರ್ಟರ್ಸ್‌ ಬಗ್ಗೆ ಹೆಚ್ಚು ನಿಗಾ :ಫೀಲ್ಡ್​ನಲ್ಲಿರುವ ಪೊಲೀಸರಿಗೆ ಕೊರೊನಾ ಧೃಢವಾಗುತ್ತಿರುವ ಕಾರಣ ಸಿಬ್ಬಂದಿ ವಾಸ ಮಾಡುವ ಕ್ವಾರ್ಟರ್ಸ್‌​​ಗಳ ಬಗ್ಗೆ ನಿಗಾ ಇಡುವಂತೆ ಎಲ್ಲಾ ಡಿಸಿಪಿಗಳಿಗೆ ಸೂಚನೆ ನೀಡಿದ್ದೇನೆ. ಪೊಲೀಸ್ ಇಲಾಖೆಯಲ್ಲಿ ಬಹಳಷ್ಟು ತರುಣರು ಇದ್ದಾರೆ. ಕೆಲವರು ಊರಿಗೆ ಹೋದವರು ಆರೋಗ್ಯದ ಬಗ್ಗೆ ಕೇರ್ ತೆಗೆದುಕೊಳ್ಳಬೇಕು. ಹಾಗೆ ಇವರ ಬಗ್ಗೆ ಆಯಾ ಠಾಣೆಯ ಇನ್ಸ್​ಪೆಕ್ಟರ್​ಗಳು ಜವಾಬ್ದಾರಿ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು.

ಅಪರಾಧಿಗಳನ್ನು ಹಿಡಿದ ಕಾರಣಪೊಲೀಸರಲ್ಲಿ ಜಾಸ್ತಿ ಕೊರೊನಾ :ಆರೋಪಿಗಳ ಸಂಪರ್ಕದಿಂದ ಪೊಲೀಸರಿಗೆ ಅತಿ ಹೆಚ್ಚಾಗಿ ಕೊರೊನಾ ಬರುತ್ತಿದೆ. ಯಾವುದೇ ಕಾರಣಕ್ಕೂ ನಮ್ಮ ಪೊಲೀಸರು ಕುಗ್ಗುವುದಿಲ್ಲ. ನಮ್ಮ ಪೊಲೀಸರಲ್ಲಿ ಡಿಸಿಪ್ಲೇನ್​ ಇದೆ. ಎಲ್ಲಾ ನಿಯಮ ಪಾಲನೆ ಮಾಡುತ್ತಾರೆ. ಯಾರಿಗೂ ಕೂಡ ನಾವು ಬಗ್ಗುವುದಿಲ್ಲ ಎಂದರು.

ನಗರದಲ್ಲಿ ಕ್ರೈಂ ರೇಟ್ ಜಾಸ್ತಿಯಾಗಿದೆ :ಸಿಲಿಕಾನ್ ಸಿಟಿಯಲ್ಲಿ ಅಪರಾಧ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿದೆ. ಕೊಲೆ, ಮೊಬೈಲ್‌ ಸ್ನ್ಯಾಚ್, ಸರಗಳ್ಳತನ, ಸೈಬರ್ ಅಪರಾಧ ಸೇರಿ ಹಲವು ಪ್ರಕರಣ ಕಂಡುಬರುತ್ತಿವೆ. ಇವೆಲ್ಲವು ಲಾಕ್​​ಡೌನ್​​ನಲ್ಲಿ ಕೆಲಸ ಇಲ್ಲದ‌ ಕಾರಣ ಜನ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಸದ್ಯ ಬೀಟ್ ಪೊಲೀಸರ ವ್ಯವಸ್ಥೆ ಹೆಚ್ಚು ಮಾಡಿದ್ದೇವೆ. ಎಲ್ಲೆಡೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ ಎಂದು ತಿಳಿಸಿದರು.

ಪೊಲೀಸ್ ಇಲಾಖೆಯಲ್ಲಿ ಹುಡುಗಿಯರದ್ದೇ ಮೇಲುಗೈ:ಬೆಂಗಳೂರು ಪೊಲೀಸರಲ್ಲಿ ಮಹಿಳಾ ಸಿಬ್ಬಂದಿಯ ಸಂಖ್ಯೆ ಹೆಚ್ಚು ಇರುವುದು ನಮಗೆ ಬಹಳಷ್ಟು ಹೆಮ್ಮೆ. 9 ಜನ ಮಹಿಳಾ ಡಿಸಿಪಿ, ಎಎಸ್ಐ, ಇನ್ಸ್​ಪೆಕ್ಟರ್, ಕೊರೊನಾ ವಾರಿಯರ್ ಆಗಿ ಠಾಣಾ ವ್ಯಾಪ್ತಿಯಲ್ಲಿ ಕೆಲಸ‌ ಮಾಡ್ತಿದ್ದಾರೆ.

ಸರ್ಕಾರದಿಂದ ಪೊಲೀಸರಿಗೆ ಒಳ್ಳೇ ಸೌಲಭ್ಯ:ಸದ್ಯ ಕೊರೊನಾ ವಾರಿಯರ್ಸ್​ಗೆ ಸರ್ಕಾರ ಬಹಳಷ್ಟು ಸೌಲಭ್ಯ ನೀಡುತ್ತಿದೆ. ಪೊಲೀಸರಲ್ಲಿ ಕೊರೊನಾ ಸೋಂಕು ಬಂದ ಕಾರಣ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬೊಮ್ಮಾಯಿ ಅವರೆಲ್ಲರೂ ಧೈರ್ಯ ತುಂಬಿ, ಬೇಕಾದ ಸೌಲಭ್ಯಗಳನ್ನೂ ನೀಡಿದ್ದಾರೆ. ಯಾರೂ ಕೂಡ ಭಯಪಡುವ ಅವಶ್ಯಕತೆ ಇಲ್ಲ ಎಂದರು.

ABOUT THE AUTHOR

...view details