ಬೆಂಗಳೂರು :ಸಮಾನ ಅವಕಾಶ ನೀಡುವ ನಿಟ್ಟಿನಲ್ಲಿ ಇಪ್ಪತ್ತೊಂದು ರೀತಿಯ ವಿಶೇಷ ಚೇತನರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.4ರಷ್ಟು ಮೀಸಲಾತಿಯನ್ನು ನೀಡಿ ಸರ್ಕಾರ ಆದೇಶಿಸಿದೆ. ಜೊತೆಗೆ ಖಾಸಗಿ ಸಂಸ್ಥೆಯಲ್ಲಿ ಪಿಎಫ್ ಹಾಗೂ ಇಎಸ್ಐ ಹಣವನ್ನು ಸಂಸ್ಥೆಯ ಪರವಾಗಿ ಕೇಂದ್ರ ಸರ್ಕಾರವೇ ಭರಿಸಲಿದೆ.
ಪಟ್ಟಿಯಲ್ಲಿ ಉಳಿದಂತ ಹಳೆಯ ವಿಶೇಷ ಚೇತನರ ಕೆಲಸದ ಅರ್ಜಿಗಳನ್ನು, ಆರ್ಥಿಕ ಪರಿಸ್ಥಿತಿ ಸುಧಾರಣೆಯ ನಂತರ ನೇಮಕಾತಿ ಮಾಡಲಾಗುತ್ತದೆ. ಇದರ ಬಗ್ಗೆ ಸರ್ಕಾರದ ಜೊತೆಗೂ ಚರ್ಚಿಸಲಾಗಿದೆ.
ರಾಜ್ಯ ವಿಶೇಷ ಚೇತನರ ಆಯೋಗದ ಅಧ್ಯಕ್ಷ ಬಸವರಾಜ್ ಈ ಕುರಿತು ಮಾತನಾಡಿದ ರಾಜ್ಯ ವಿಶೇಷ ಚೇತನರ ಆಯೋಗದ ಅಧ್ಯಕ್ಷ ಬಸವರಾಜ್, ವಿಶೇಷ ಚೇತನರಿಗೆ ಕೆಲಸ ನೀಡಿದ ಸಂದರ್ಭದಲ್ಲಿ ರಾಜ್ಯ ಅಂಗವಿಕಲ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳಬೇಕು.
ಖಾಸಗಿ ಸಂಸ್ಥೆಗಳು ವಿಶೇಷ ಚೇತನರಿಗೆ ಕೆಲಸ ನೀಡಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹತ್ತು ವರ್ಷಗಳಿಗೆ ವಿಶೇಷ ಚೇತನ ಯೋಜನೆಯಡಿ ಪಿಎಫ್ ಹಾಗೂ ಇಎಸ್ಐಗೆ ಕಟ್ಟಬೇಕಾದ ಹಣವನ್ನು ಸರ್ಕಾರವೇ ಭರಿಸುತ್ತದೆ. ಇದರ ಜೊತೆಗೆ ಗ್ರಾಚ್ಯುಟಿ ಕೂಡ ಸರ್ಕಾರದ ಖಾಸಗಿ ಸಂಸ್ಥೆಯವರಿಗೆ ಮರುಪಾವತಿಸಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಸುಮಾರು ಏಳು ಲಕ್ಷಕ್ಕೂ ಅಧಿಕ ವಿಶೇಷಚೇತನರು ಕೆಲಸಕ್ಕೆ ಯೋಗ್ಯವಾಗಿದ್ದಾರೆ. ಇವರ ಪ್ರಗತಿಗೆ ಬಹಳಷ್ಟು ಕ್ರಮಗಳು ಹಾಗೂ ಯೋಜನೆಗಳನ್ನು ಕೈಗೊಳ್ಳಬೇಕಿದೆ. ವಿಶೇಷ ಚೇತನರು ಸಮಾಜದ ಪಾಲುದಾರರೇ.. ಹೀಗಾಗಿ ಅವರಿಗೆ ಸಮಾಜದಲ್ಲಿ ಸಮಾನ ಅವಕಾಶ ಸಿಗಬೇಕಾಗಿದೆ.
ಸರ್ಕಾರ 4% ಮೀಸಲಾತಿ ಇವರಿಗೆ ಕಲ್ಪಿಸಿದೆ. ಆದರೆ, ಅಪಾರ ಸಂಖ್ಯೆಯಲ್ಲಿ ವಿಶೇಷ ಚೇತನರು ಭಾರತದಲ್ಲಿರುವ ಕಾರಣದಿಂದ, ಖಾಸಗಿ ಸಂಸ್ಥೆಯವರು ಕೆಲಸ ನೀಡಿದ್ರೆ ಮಾತ್ರ ಇವರ ಅಭಿವೃದ್ಧಿಯ ಪಥಕ್ಕೆ ಕೈಜೋಡಿಸಿದಂತಾಗುತ್ತದೆ.