ಕರ್ನಾಟಕ

karnataka

ಟೋಯಿಂಗ್ ವಾಹನಗಳ ಬಿಡಿಭಾಗ ಕಳ್ಳತನ; ಸಿಬ್ಬಂದಿಯೇ ಶಾಮೀಲು ಶಂಕೆ

By

Published : Mar 11, 2021, 4:33 PM IST

ಟೋಯಿಂಗ್ ನೆಪದಲ್ಲಿ ವಾಹನಗಳ ಬಿಡಿಭಾಗಗಳ ಕಳ್ಳತನವಾಗುತ್ತಿದ್ದು, ಟೋಯಿಂಗ್​ ಸಿಬ್ಬಂದಿಗಳೇ ಕಳುವು ಮಾಡುತ್ತಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.

Bike
ಬೈಕ್​

ಬೆಂಗಳೂರು: ನೋ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದ್ದ ಬೈಕ್​ಗಳನ್ನು ಟೋಯಿಂಗ್​ ಮಾಡಿದ ವೇಳೆ ವಾಹನಗಳ ಬಿಡಿಭಾಗಗಳ ಕಳ್ಳತನವಾಗುತ್ತಿದ್ದು, ಟೋಯಿಂಗ್​ ಸಿಬ್ಬಂದಿಯೇ ಕಳುವು ಮಾಡುತ್ತಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.

ಟೋಯಿಂಗ್ ನೆಪದಲ್ಲಿ ಟೋಯಿಂಗ್​ ಸಿಬ್ಬಂದಿಯೇ ಈ ದಂಧೆಗೆ ಇಳಿದಿದ್ದಾರಾ ಎಂಬ ಗುಮಾನಿಯನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದಿನ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ನಿಷೇಧಿತ ಪ್ರದೇಶಗಳಲ್ಲಿ ನಿಲ್ಲಿಸಿರುವ ವಾಹನಗಳ ಟೋಯಿಂಗ್ ಮಾಡುವ ಮುನ್ನ ಅನೌನ್ಸಮೆಂಟ್ ಮಾಡಬೇಕು. ಒಂದು ವೇಳೆ ಅನೌನ್ಸಮೆಂಟ್ ಮಾಡಿದರೂ ವಾಹನವನ್ನು ನಿಧಾನವಾಗಿ ಎತ್ತೊಯ್ಯಬೇಕು ಎಂದು ಆದೇಶಿಸಿದ್ದರು. ಆದರೆ ಈಗ ಯಾವುದೇ ಅನೌನ್ಸಮೆಂಟ್ ಇಲ್ಲದೆ ಎತ್ತೊಯ್ಯುತ್ತಿದ್ದಾರೆ.

ಟೋಯಿಂಗ್ ಮಾಡೋದಷ್ಟೇ ಅಲ್ಲ, ಅದರ ಪಾರ್ಟ್ಸ್ ಕೂಡ ಕದಿಯುತ್ತಿದ್ದಾರೆ. ಅಲ್ಲದೆ ವಾಹನಗಳ ದಾಖಲಾತಿಗಳನ್ನು ದೋಚುತ್ತಾರೆ ಎಂಬ ಆರೋಪ‌ ಕೇಳಿಬಂದಿದೆ. ವಾಹನ ಮಾಲೀಕರು ಟೋಯಿಂಗ್ ಸಿಬ್ಬಂದಿ ನಡೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸುವಂತೆ ಮನವಿ ಮಾಡಿದ್ದಾರೆ.

ABOUT THE AUTHOR

...view details