ಬೆಂಗಳೂರು : ಕೆಲಸ ಮಾಡಿದ್ದ ತಮ್ಮ ಸಂಬಳ ಕೊಡುವಂತೆ ಕೇಳಿದ ಕಾರಣಕ್ಕೆ ಸ್ಪಾ ಮಾಲೀಕನೊಬ್ಬ ಮಹಿಳೆಗೆ ಕಪಾಳಮೋಕ್ಷ ಮಾಡಿ, ಒದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.
ಮನೋಜ್ ಎಂಬಾತ ನಡೆಸುತ್ತಿದ್ದ ಸ್ಪಾನಲ್ಲಿ ಲಕ್ಷ್ಮಮ್ಮ ಎಂಬುವರು ಕೆಲಸ ಮಾಡುತ್ತಿದ್ದರು. ಹಣಕಾಸಿನ ಸಮಸ್ಯೆಯಿಂದ ಕುಮಾರಸ್ವಾಮಿ ಲೇಔಟ್ ಬಳಿಯಿರುವ ಮನೋಜ್ ಮನೆ ಬಳಿ ಇದೇ ತಿಂಗಳ 21 ರಂದು ತೆರಳಿ 'ಸಾರ್ ನನಗೆ ಸ್ವಲ್ಪ ದುಡ್ಡು ಬೇಕು, ದಯವಿಟ್ಟು ಕೊಡಿ ಸಾರ್' ಎಂದು ಕೇಳಿದ್ದಾರೆ. ಆಗ ಮನೋಜ್ ಅವಾಚ್ಯ ಶಬ್ದಗಳಿಂದ ಬೈದು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ.