ಬೆಂಗಳೂರು:ನಗರದಲ್ಲಿ ಸೀಲ್ ಡೌನ್ ವಾರ್ಡ್ಗಳನ್ನು ಹೊರತುಪಡಿಸಿ ಉಳಿದ ವಾರ್ಡ್ಗಳಲ್ಲಿ ಅಂಗಡಿ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
ಸೀಲ್ ಡೌನ್ ಪ್ರದೇಶ ಬಿಟ್ಟು ಸಿಲಿಕಾನ್ ಸಿಟಿಯಲ್ಲಿ ಕೆಲ ಅಂಗಡಿಗಳಿಗೆ ಲಾಕ್ಡೌನ್ನಿಂದ ವಿನಾಯಿತಿ
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಿಮೆಂಟ್ ಮಾರಾಟ, ಕಬ್ಬಿಣ ವ್ಯಾಪಾರ, ಹಾರ್ಡ್ವೇರ್ ಶಾಪ್ಗಳು, ಪ್ಲಂಬಿಂಗ್ ಮಳಿಗೆಗಳ ವ್ಯಾಪಾರವನ್ನು ಮುಂದಿನ ಸೋಮವಾರದಿಂದ ಆರಂಭಿಸಬಹುದಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಸೀಲ್ಡೌನ್ ಸಡಿಲಿಕೆ ಹಿನ್ನೆಲೆ ಕೆಲ ಮಳಿಗೆಗಳ ತೆರೆಯಲು ಅನುಮತಿ
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಿಮೆಂಟ್ ಮಾರಾಟ, ಕಬ್ಬಿಣ ವ್ಯಾಪಾರ, ಹಾರ್ಡ್ವೇರ್ ಶಾಪ್ಗಳು, ಪ್ಲಂಬಿಂಗ್ ಮಳಿಗೆಗಳ ವ್ಯಾಪಾರವನ್ನು ದಿನಾಂಕ 4.05.2020ರಿಂದ ಆರಂಭಿಸಬಹುದಾಗಿದೆ ಎಂದು ತಿಳಿಸಿದ್ದಾರೆ.