ಕರ್ನಾಟಕ

karnataka

ETV Bharat / state

Unlock 2.0: 16 ಜಿಲ್ಲೆಗಳ ಜೊತೆಗೆ ಮತ್ತೆ 6 ಜಿಲ್ಲೆಗಳಲ್ಲಿ ನಿರ್ಬಂಧ ಸಡಿಲಿಕೆ

ಉಡುಪಿ ಜಿಲ್ಲೆ ಸೇರಿದಂತೆ ಆರು ಜಿಲ್ಲೆಗಳನ್ನು ಅನ್ ಲಾಕ್ ಮಾಡಿ ರಾಜ್ಯ ಸರಕಾರ ಇಂದು ಮಹತ್ವದ ಆದೇಶ ಹೊರಡಿಸಿದೆ.

six more district unlock in karnataka
six more district unlock in karnataka

By

Published : Jun 21, 2021, 6:08 PM IST

ಬೆಂಗಳೂರು :ಕೋವಿಡ್ ಸೋಂಕಿತರ ಟೆಸ್ಟ್‌ನಲ್ಲಿ ಪಾಸಿಟಿವಿಟಿ ದರ ಶೇ. 5 ಕ್ಕಿಂತಲೂ ಕಡಿಮೆ ದಾಖಲಾದ ಆರು ಜಿಲ್ಲೆಗಳಲ್ಲಿ ರಾಜ್ಯ ಸರಕಾರ ಅನ್ ಲಾಕ್ ಘೋಷಣೆ ಮಾಡಿದೆ. ಹೀಗಾಗಿ 16 ಜಿಲ್ಲೆಗಳ ಜೊತೆಗೆ ಇದೀಗ ಮತ್ತೆ ಆರು ಜಿಲ್ಲೆಗಳು ಅನ್​ಲಾಕ್​ ಆಗಿವೆ. ಇಂದಿನಿಂದಲೇ ಈ ಆದೇಶ ಜಾರಿಯಲ್ಲಿರಲಿದೆ.

ಶಿವಮೊಗ್ಗ, ಉಡುಪಿ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿತ್ರದುರ್ಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಲಾಕ್​ಡೌನ್ ಸಡಿಲಗೊಳಿಸಲಾಗಿದೆ. ಅನ್​ಲಾಕ್ ಪ್ರಕಾರ ಈ ಆರು ಜಿಲ್ಲೆಗಳಲ್ಲಿ ಬೆಳಗ್ಗೆಯಿಂದ ಸಂಜೆ 5 ಗಂಟೆಯವರೆಗೆ ವಾಣಿಜ್ಯ ಚಟುವಟಿಕೆಗಳನ್ನು ನಡೆಸಬಹುದಾಗಿದೆ. ಜನಸಂಚಾರ ಮತ್ತು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು. ಜುಲೈ 5ರ ಬೆಳಗ್ಗೆ 5ಗಂಟೆ ತನಕ ಈ ಅನ್​ಲಾಕ್ ಜಾರಿಯಲ್ಲಿರುತ್ತದೆ.

ರಾಜ್ಯ ಸರ್ಕಾರದ ಮಹತ್ವದ ಆದೇಶ

ಕಳೆದ ವಾರ ಅನ್​ಲಾಕ್​ ಘೋಷಣೆ ಮಾಡುವಾಗ ಈ ಆರು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.5ಕ್ಕಿಂತಲೂ ಹೆಚ್ಚಿಗೆ ಇದ್ದಿದ್ದರಿಂದ ಅನ್​ಲಾಕ್​ ಮಾಡಿರಲಿಲ್ಲ. ಆದರೆ, ನಿನ್ನೆ ಭಾನುವಾರ (ಜೂನ್​​ 20) ರಂದು ಕೋವಿಡ್ ಟೆಸ್ಟ್​ನಲ್ಲಿ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆ ದಾಖಲಾಗಿದ್ದರಿಂದ ಇಂದಿನಿಂದಲೇ ಅನ್ವಯವಾಗುವಂತೆ ಅನ್​ಲಾಕ್​​ ಪ್ರಕಟಿಸಿ ಕಂದಾಯ ಇಲಾಖೆ ಪ್ರಧಾನ‌ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.

ಯಾವೆಲ್ಲ ಜಿಲ್ಲೆಗಳು ಅನ್​ಲಾಕ್​?

ಮೊದಲ ಹಂತದಲ್ಲಿ ರಾಯಚೂರು, ಕೊಪ್ಪಳ, ಕಲಬುರಗಿ, ರಾಮನಗರ, ಉತ್ತರ ಕನ್ನಡ, ಮಂಡ್ಯ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಹಾವೇರಿ, ಬೀದರ್​, ಬೆಳಗಾವಿ, ಕೋಲಾರ, ಯಾದಗಿರಿ ಹಾಗೂ ಬಾಗಲಕೋಟೆ ಅನ್​ಲಾಕ್​​ ಆಗಿವೆ. ಇದೀಗ ಉಡುಪಿ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ವಿಜಯಪುರ ಅನ್​ಲಾಕ್​​ ಆಗಿವೆ.

ABOUT THE AUTHOR

...view details