ಕರ್ನಾಟಕ

karnataka

ETV Bharat / state

ಐದು ನೋಟಿಸ್​ಗಳಿಗೂ ಯುವತಿಯಿಂದ ನೋ ರೆಸ್ಪಾನ್ಸ್​: ವಿಧಾನಸೌಧಕ್ಕೆ ದೌಡಾಯಿಸಿದ ಎಸ್​ಐಟಿ ಅಧಿಕಾರಿಗಳು - Twist to the Zarakihulli case

ಸಿಡಿ ಲೇಡಿಗೆ ಮತ್ತೊಂದು ನೋಟಿಸ್ ಜಾರಿ ಮಾಡಲು ಸಿದ್ಧತೆ ನಡೆದಿದ್ದು, ಎಸ್ ಐ ಟಿ ಅಧಿಕಾರಿಗಳು ದೇಶದೆಲ್ಲೆಡೆ ಹುಡುಕಾಟವನ್ನು ಮುಂದುವರೆಸಿದ್ದಾರೆ. ಈವರೆಗೆ ನೀಡಿರುವ ಐದು ನೋಟಿಸ್​ಗಳಿಗೆ ಯುವತಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಂತೆ. ಹೀಗಾಗಿ ಸಿಡಿ ಪ್ರಕರಣ ಗಂಟೆಗೊಂದು ಟ್ವಿಸ್ಟ್​ ಪಡೆಯುತ್ತಿದೆ.

cd-young-woman-search-by-sit-officers
ಜಾರಕಿಹೊಳಿ

By

Published : Mar 23, 2021, 3:14 PM IST

ಬೆಂಗಳೂರು:ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಎಸ್ಐಟಿ ತನಿಖೆ ಗಂಟೆಗೊಂದು ಟ್ವಿಸ್ಟ್ ಗಳನ್ನು ಪಡೆಯುತ್ತಿದ್ದು, ಸಾಲು ಸಾಲು ಸುದ್ದಿಗಳು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಪ್ರಕರಣದ ಕುರಿತು ತನಿಖೆಗೆ ಹಾಜರಾಗುವಂತೆ ತನಿಖಾಧಿಕಾರಿಗಳು ಇಮೇಲ್​ನಲ್ಲಿ ಕಳುಹಿಸಿದ್ದ ನೋಟಿಸ್​ನ್ನು ಯುವತಿ ನೋಡಿದ್ದಾಳೆ ಎನ್ನುವ ಮಾಹಿತಿ ಹೊರಬಿದ್ದಿದೆ. ಆದರೆ, ಪೊಲೀಸರ ನೋಟಿಸ್​ಗೆ ಆಕೆಯಿಂದ ಯಾವುದೇ ಉತ್ತರ ದೊರೆತಿಲ್ಲ ಎನ್ನಲಾಗ್ತಿದೆ.

ಸಿಡಿ ಲೇಡಿಗೆ ಮತ್ತೊಂದು ನೋಟಿಸ್ ಜಾರಿ ಮಾಡಲು ಸಿದ್ಧತೆ ನಡೆದಿದ್ದು, ಎಸ್ ಐ ಟಿ ಅಧಿಕಾರಿಗಳು ದೇಶದೆಲ್ಲೆಡೆ ಹುಡುಕಾಟವನ್ನು ಮುಂದುವರೆಸಿದ್ದಾರೆ. ನೋಟಿಸ್ ತಲುಪಿದ ಕೂಡಲೇ ವಿಚಾರಣೆಗೆ ಹಾಜರಾಗುವಂತೆ ವಾಟ್ಸಪ್, ಇ ಮೇಲ್ ಮೂಲಕ ಸಂದೇಶ ರವಾನಿಸಲಾಗಿದ್ದು, ಇದುವರೆಗೆ ಯುವತಿಗೆ ಒಟ್ಟು ಐದು ನೋಟಿಸ್ ಜಾರಿ ಮಾಡಿದಂತಾಗಿದೆ.

ಓದಿ:ಕೊನೆಗೂ ಸಿಡಿ ಲೇಡಿ ಪೋಷಕರು ಪತ್ತೆ: ಯುವತಿಯ ತಂದೆ-ತಾಯಿ ಹೇಳಿಕೆ ದಾಖಲು?

ವಿಧಾನಸೌಧ ತಲುಪಿದ ಎಸ್ಐಟಿ ತಂಡ :ಈ ನಡುವೆ ಎಸ್ ಐ ಟಿ ಅಧಿಕಾರಿಗಳು ವಿಧಾನಸೌಧಕ್ಕೆ ತಲುಪಿ ಮುಖ್ಯಮಂತ್ರಿ, ಗೃಹ ಸಚಿವರಿಗೆ ಮಾಹಿತಿ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್ ಸಿಡಿ ವಿಚಾರದಲ್ಲಿ ಎತ್ತುತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ಸಿಎಂ ಯಡಿಯೂರಪ್ಪ ಅವರು ಎಸ್ಐಟಿ ಅಧಿಕಾರಿಗಳನ್ನು ಕರೆಸಿ ಚರ್ಚೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ABOUT THE AUTHOR

...view details