ಕರ್ನಾಟಕ

karnataka

ETV Bharat / state

ನಿಜಾಮುದ್ದೀನ್​ ಧಾರ್ಮಿಕ ಸಭೆಗೆ ತೆರಳಿದ್ದವರ ಪತ್ತೆಗೆ ಸಿಲಿಕಾನ್​ ಸಿಟಿ ಪೊಲೀಸರ ತಲಾಶ್

ಬೆಂಗಳೂರಿನಿಂದ ದೆಹಲಿಗೆ 1,050 ಮಂದಿ ಮಾರ್ಚ್‌ನಲ್ಲಿ ತೆರಳಿದ್ದರೆಂದು ತಿಳಿದು ಬಂದಿದೆ. ಅಷ್ಟೂ ಜನರನ್ನೂ ಪತ್ತೆ ಮಾಡಲು ಇದೀಗ ನಗರ ಪೊಲೀಸರು ಮುಂದಾಗಿದ್ದಾರೆ.

ನಿಜಾಮುದ್ದೀನ್​  ಧಾರ್ಮಿಕ ಸಭೆ
ನಿಜಾಮುದ್ದೀನ್​ ಧಾರ್ಮಿಕ ಸಭೆ

By

Published : Apr 1, 2020, 11:35 AM IST

ಬೆಂಗಳೂರು:ದೆಹಲಿಯ ನಿಜಾಮುದ್ದೀನ್ ಪ್ರದೇಶದ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದ ಜನರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ನಿರತರಾಗಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಈ ಬಗ್ಗೆ ಈಗಾಗಲೇ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ಮಾರ್ಚ್ 13 ರಿಂದ ಮಾರ್ಚ್ 15ರವರೆಗೆ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಎಲ್ಲರ ಮೇಲೂ ವಿಶೇಷ ಕಣ್ಣಿಟ್ಟಿರುವ ಪೊಲೀಸರು ನಗರದ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಬಳಿ ಇಬ್ಬರನ್ನು ಪತ್ತೆ ಮಾಡಿದ್ದಾರೆ. ಡಿ.ಜೆ. ಹಳ್ಳಿಯ ನಿವಾಸಿಯೊಬ್ಬರು ದೆಹಲಿಗೆ ತೆರಳಿ‌ ಪ್ರಾರ್ಥನೆಯಲ್ಲಿ ಭಾಗಿಯಾಗಿ ನಂತರ ದೆಹಲಿಯಿಂದ ವಾಪಸ್ಸಾಗಿದ್ದು, ಬಳಿಕ ಡಿ.ಜೆ.ಹಳ್ಳಿಯಲ್ಲೆ ವಾಸವಿದ್ದರು. ಹೀಗಾಗಿ ಪೊಲೀಸರು‌ ತಡರಾತ್ರಿ ಅವರ ಮನೆಗೆ ಹೋಗಿ ಕ್ವಾರಂಟೈನ್ ಸೀಲ್ ಹಾಕಿದ್ದಾರೆ.

ಮತ್ತೊಬ್ಬ ಉರ್ದು ಶಿಕ್ಷಕ ದೆಹಲಿಗೆ ತೆರಳಿದ್ದು,ವಾಪಸ್ಸಾದ ನಂತ್ರ ಕೆ.ಜಿ.ಹಳ್ಳಿಯಲ್ಲೇ ಇದ್ದರು. ಸದ್ಯ ಪೊಲೀಸರು ಇವರಿಗೂ ಕ್ವಾರಂಟೈನ್ ಸೀಲ್ ಹಾಕಿದ್ದಾರೆ. ಆದರೆ ಈ ವ್ಯಕ್ತಿಯಲ್ಲಿ ಕೊರೊನಾ ಲಕ್ಷಣಗಳು ಗೋಚರಿಸಿಲ್ಲ.
ಪೊಲೀಸರಿಗೆ ಬಂದಿರುವ ಮಾಹಿತಿ ಪ್ರಕಾರ, ಬೆಂಗಳೂರಿನಿಂದ 1,050 ಜನರು ಮಾರ್ಚ್‌ನಲ್ಲಿ ತೆರಳಿದ್ರು. ಹೀಗಾಗಿ 1,050 ಜನರ ಪತ್ತೆ ಮಾಡಲು ನಗರ ಪೊಲೀಸರು ಮುಂದಾಗಿದ್ದು‌, ಅಷ್ಟೂ ಜನರನ್ನು ಪತ್ತೆ ಮಾಡಿ ಕ್ವಾರಂಟೈನ್ ಸೆಂಟರ್‌ಗೆ ಕಳಿಸುವ ಸಾಧ್ಯತೆ ಇದೆ.

ABOUT THE AUTHOR

...view details