ಕರ್ನಾಟಕ

karnataka

ETV Bharat / state

ಕಲಾವಿದನ ಕುಂಚದಲ್ಲಿ ಅರಳಿದ ವಿಸ್ಮಯಕ್ಕೆ ಬೆರಗಾದ ಸಿಲಿಕಾನ್ ಸಿಟಿ ಜನ

ಒಂದೆಡೆ ಬೆಳೆಯುತ್ತಿರುವ ನಗರಗಳು, ಆಕಾಶಕ್ಕೆ ಮುತ್ತಿಡುವ ಕಟ್ಟಡಗಳು, ಮತ್ತೊಂದೆಡೆ ದೊಡ್ಡ ದೊಡ್ಡ ರೆಸ್ಟೋರೆಂಟ್​ಗಳು, ಕೈಚಾಚಿದರೆ ಸಿಗಬಹುದೇನೋ ಎಂಬಂತೆ ನೈಜ್ಯವಾಗಿ ತೋರುವ ಮೋಡಗಳ ರಾಶಿ ಇವುಗಳ ನಡುವೆ ಆರೋಗ್ಯ ನೀಡುವ ಹಸಿರು ಮಾತ್ರ ಕಾಣೆಯಾಗುತ್ತಿದೆ ಇದನ್ನೇ ಕಲಾವಿದ ವಿಮಲನಾಥನ್ ಕುಂಚದಲ್ಲಿ ಚಿತ್ರಿಸಿದ್ದಾರೆ.

By

Published : Aug 3, 2019, 3:39 PM IST

ಮನಸೆಳೆದ ಸಿಟಿ ಲೈಟ್ಸ್ ಕಲಾಯಾತ್ರೆ

ಬೆಂಗಳೂರು:ಗಾರ್ಡನ್ ಸಿಟಿಯ ಹಸಿರು ಮಾಯವಾಗಿದೆ. ಖ್ಯಾತ ಚಿತ್ರಗಾರ ಎಸ್.ಎ. ವಿಮಲನಾಥನ್ ಬೆಂಗಳೂರನ್ನೇ ತಮ್ಮ ಕಲಾವಸ್ತುವಾಗಿ ಆಯ್ದುಕೊಂಡು, ಹಸಿರು ಬೆಂಗಳೂರು ಈಗ ಕಲರ್ ಫುಲ್ ಸಿಟಿಯಾದ ಕತೆಯನ್ನು "ಸಿಟಿ ಲೈಟ್ಸ್" ಶೀರ್ಷಿಕೆಯಡಿ ನಗರವನ್ನು ತಮ್ಮ ಕುಂಚದಲ್ಲಿ ಚಿತ್ರಿಸಿದ್ದಾರೆ.

ಮನಸೆಳೆದ ಸಿಟಿ ಲೈಟ್ಸ್ ಕಲಾಯಾತ್ರೆ

ಒಂದೆಡೆ ಬೆಳೆಯುತ್ತಿರುವ ನಗರಗಳು, ಆಕಾಶಕ್ಕೆ ಮುತ್ತಿಡುವ ಕಟ್ಟಡಗಳು, ಮತ್ತೊಂದೆಡೆ ದೊಡ್ಡ ದೊಡ್ಡ ರೆಸ್ಟೋರೆಂಟ್​ಗಳು, ಕೈಚಾಚಿದರೆ ಸಿಗಬಹುದೇನೋ ಎಂಬಂತೆ ನೈಜ್ಯವಾಗಿ ತೋರುವ ಮೋಡಗಳ ರಾಶಿ ಇವುಗಳ ನಡುವೆ ಆರೋಗ್ಯ ನೀಡುವ ಹಸಿರು ಮಾತ್ರ ಕಾಣೆಯಾಗುತ್ತಿದೆ ಇದನ್ನೇ ಕಲಾವಿದ ವಿಮಲನಾಥನ್ ಕುಂಚದಲ್ಲಿ ಚಿತ್ರಿಸಿದ್ದಾರೆ.

ಸ್ವಾತಂತ್ರ್ಯ, ಸಬಲೀಕರಣದ ಸಂದೇಶ ಅಡಗಿಸಿಕೊಂಡಿರುವ ಚಿತ್ರಗಳು ನೋಡುಗರ ಮನಸೂರೆಗೊಂಡವು. ದೇವತೆಗಳ ವಾಹನಗಳನ್ನು (ಪ್ರಾಣಿ, ಪಕ್ಷಿಗಳು) ಸಮಾಕಾಲಿನ ಮಹಿಳೆಯರ ಚಿತ್ರಗಳ ಜೊತೆ ಬಿಡಿಸಿ, ಮಹಿಳೆಯರ ಶಕ್ತಿಯನ್ನು ತಿಳಿಸುವುದರ ಜೊತೆಗೆ ಅಸಮಾನತೆಯ ವಿರುದ್ಧ ಧ್ವನಿ ಎತ್ತುವ ಚಿತ್ರಗಳನ್ನು ಚಿತ್ರಿಸಿದ್ದಾರೆ.

ಚಿತ್ರಕಲಾವಿದ ಎಸ್.ಎ. ವಿಮಲನಾಥನ್ ಮಾತನಾಡಿ, ಒಂದು ವರ್ಷದ ಹಿಂದೆಯೇ ಈ ಗ್ಯಾಲರಿ ಬುಕ್ ಮಾಡಿ, ಈ ಚಿತ್ರ ಪ್ರದರ್ಶನದ ಸಿದ್ಧತೆ ನಡೆಯಿತು. ಹೊಸ ರೀತಿಯ ವಿಷಯಗಳೊಂದಿಗೆ ಚಿತ್ರ ಬಿಡಿಸಲಾಗಿದೆ. ಇದಕ್ಕೆ ನನ್ನ ಹೆಂಡತಿಯೇ ಸ್ಫೂರ್ತಿ ಎಂದರು.

ಚಿತ್ರಕಲಾ ಪರಿಷತ್ ಅಧ್ಯಕ್ಷರಾದ ಬಿ.ಎಲ್. ಶಂಕರ್ ಮಾತನಾಡಿ, ರಾಜ್ಯದ ಪ್ರಸಿದ್ಧ ಕಲಾವಿದ ವಿಮಲನಾಥನ್ ನಗರದ ಬೆಳವಣಿಗೆಯನ್ನು ಬಹಳ ಅರ್ಥಪೂರ್ಣವಾಗಿ ಬಿಡಿಸಿದ್ದಾರೆ ಎಂದು ಹೇಳಿದರು.

ಡೇರಾ ಆರ್ಟ್ ಸ್ಟುಡಿಯೋ ಪ್ರಸ್ತುತ ಪಡೆಸುತ್ತಿರುವ ಈ ಚಿತ್ರಕಲಾ ಪ್ರದರ್ಶನ ಹಾಗೂ ಮಾರಾಟ ಉದ್ಘಾಟನೆಗೊಂಡಿದ್ದು, ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಆಗಸ್ಟ್​ 7ರವರೆಗೆ ಪ್ರದರ್ಶನಗೊಳ್ಳಲಿದೆ.

ABOUT THE AUTHOR

...view details