ಬೆಂಗಳೂರು: ಗೌರಿ ಗಣೇಶ ಹಬ್ಬ ನಮಗೆ ಅತಿ ಮುಖ್ಯವಾದ ಹಬ್ಬವಾಗಿದ್ದು, ಕೋವಿಡ್ ಹರಡದ ರೀತಿ ಹಬ್ಬದ ಆಚರಣೆ ಅಗತ್ಯವಿದೆ. ಗಣೇಶ ಚತುರ್ಥಿ ಆಚರಣೆ ಕುರಿತು ಸರ್ಕಾರ ಇಂದು ನಿರ್ಧಾರ ಪ್ರಕಟಿಸಲಿದೆ ಎಂದು ಸಂಸದ ಡಾ.ಉಮೇಶ್ ಜಾಧವ್ ಹೇಳಿದ್ದಾರೆ.
ಗಣೇಶ ಹಬ್ಬ ಆಚರಣೆ ಕುರಿತು ಇಂದು ಮಹತ್ವದ ನಿರ್ಧಾರ ಪ್ರಕಟ: ಸಂಸದ ಉಮೇಶ್ ಜಾಧವ್ - MP Umesh Jadhav
ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಕೆಲ ಸಮಯ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಉಮೇಶ್ ಜಾಧವ್, ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಣೆಗೆ ಅವಕಾಶ ವಿಚಾರ ವ್ಯಾಪಕ ಚರ್ಚೆಯಾಗುತ್ತಿದೆ. ನಮಗೆ ಗೌರಿ ಗಣೇಶ ಹಬ್ಬ ತುಂಬಾ ಮುಖ್ಯ. ಆದರೆ, ಮಾರ್ಗಸೂಚಿ ಪ್ರಕಾರ ಹಬ್ಬ ಆಚರಣೆ ಮಾಡಬೇಕು ಎಂದಿದ್ದಾರೆ.
ಅವರು ಇಂದು ಆರ್.ಟಿ ನಗರದಲ್ಲಿರುವ ಸಿಎಂ ನಿವಾಸಕ್ಕೆ ಭೇಟಿ ನೀಡಿದರು. ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಕೆಲ ಸಮಯ ಚರ್ಚೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಮೇಶ್ ಜಾಧವ್, ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಣೆಗೆ ಅವಕಾಶ ವಿಚಾರ ವ್ಯಾಪಕ ಚರ್ಚೆಯಾಗುತ್ತಿದೆ. ನಮಗೆ ಗೌರಿ ಗಣೇಶ ಹಬ್ಬ ತುಂಬಾ ಮುಖ್ಯ. ಆದರೆ, ಮಾರ್ಗಸೂಚಿ ಪ್ರಕಾರ ಹಬ್ಬ ಆಚರಣೆ ಮಾಡಬೇಕು. ಈ ಬಗ್ಗೆ ಸರ್ಕಾರ ಇಂದು ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು.
ಈಗಾಗಲೇ ಕೊರೊನಾದಿಂದ ಹಲವು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಮತ್ತೆ ಕೋವಿಡ್ ಹರಡದ ರೀತಿ ಕ್ರಮ ವಹಿಸಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರದ ಉನ್ನತ ಕಮಿಟಿ ಏನು ತೀರ್ಮಾನ ಮಾಡುತ್ತದೆಯೋ ಅದರಂತೆ ರಾಜ್ಯದಲ್ಲಿ ಗೌರಿ ಗಣೇಶ ಹಬ್ಬ ಆಚರಣೆ ಮಾಡಬೇಕು. ನಾನು ವೈದ್ಯನಾಗಿರುವುದರಿಂದ ಈ ಮಾತು ಹೇಳುತ್ತಿದ್ದೇನೆ. ಕೊರೊನಾ ಬಾರದ ರೀತಿ ಹಬ್ಬ ಆಚರಣೆಗೆ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.