ಕರ್ನಾಟಕ

karnataka

ETV Bharat / state

ಮತದಾರರಲ್ಲಿ ಜಾಗೃತಿಗಾಗಿ ಸಹಿ ಅಭಿಯಾನ - ಜಿಲ್ಲಾ ಚುನಾವಣಾಧಿಕಾರಿ ಕರೀಗೌಡ

ಲೋಕಸಭಾ ಚುನಾವಣೆ ಹಿನ್ನೆಲೆ ಚುನಾವಣಾ ಅಧಿಕಾರಿಗಳು ಸಹಿ ಕಾರ್ಯಕ್ರಮ ಆಯೋಜಿಸಿದ್ದು, ನೂರಾರು ಜನರಿಗೆ ಸಹಿ ಮಾಡಿಸುವ ಮೂಲಕ‌ ಮತದಾನದ ಕುರಿತು ಜಾಗೃತಿ ಮೂಡಿಸಿದರು.‌

ಮತದಾರರಲ್ಲಿ ಜಾಗೃತಿಗಾಗಿ ಸಹಿ ಅಭಿಯಾನ

By

Published : Mar 22, 2019, 4:49 AM IST

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು‌ ಚುನಾವಣಾ ಅಧಿಕಾರಿಗಳು ಮಾಡುತ್ತಲೇ‌ ಬಂದಿದ್ದಾರೆ. ಮತದಾರರ ಜಾಗೃತಿ ಅಭಿಯಾನದ ಅಂಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಂಚಾಯತಿ ಕಾರ್ಯಾಲಯ ಆವರಣದಲ್ಲಿ ಮತದಾರರ ಜಾಗೃತಿಗಾಗಿ ಸಹಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮತದಾರರಲ್ಲಿ ಜಾಗೃತಿಗಾಗಿ ಸಹಿ ಅಭಿಯಾನ

ವಿನೂತನ ಹಾಗೂ ವಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿರುವ ಚುನಾವಣಾ ಅಧಿಕಾರಿಗಳು ಸಹಿ ಕಾರ್ಯಕ್ರಮ ಆಯೋಜಿಸಿದ್ದು ನೂರಾರು ಜನರಿಗೆ ಸಹಿ ಮಾಡಿಸುವ ಮೂಲಕ‌ ಮತದಾನದ ಕುರಿತು ಜಾಗೃತಿ ಮೂಡಿಸಿದರು.‌

ಲೋಕಸಭಾ ಚುನಾವಣೆಯಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಶೇ 100ರಷ್ಟು ಮಾತದಾನ ಮಾಡಿಸುವ ಗುರಿಯನ್ನು ಹೊಂದುವ ದೃಷ್ಟಿಯಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕರೀಗೌಡ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲತಾ ಸೇರಿದಂತೆ ಪುರಸಭೆ, ನಗರಸಭೆ ಅಧಿಕಾರಿಗಳು ಚುನಾವಣೆ ಹಿನ್ನೆಲೆ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ABOUT THE AUTHOR

...view details