ಕರ್ನಾಟಕ

karnataka

ETV Bharat / state

ರಾಜಕೀಯ ಗಣ್ಯರಿಂದ ಉಕ್ಕಿನ ಮನುಷ್ಯನಿಗೆ ನಮನ ಸಲ್ಲಿಕೆ

ಸರ್ದಾರ್ ವಲ್ಲಭಭಾಯಿ ಪಟೇಲ್ ಸಿದ್ದರಾಮಯ್ಯ ಜನ್ಮ ದಿನದ ನಿಮಿತ್ತ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್​​ ವರಿಷ್ಠ ದೇವೇಗೌಡರು ಟ್ವೀಟ್​ ಮೂಲಕ ತಮ್ಮ ನಮನ ಸಲ್ಲಿಕೆ ಮಾಡಿದ್ದಾರೆ.

ಟ್ವೀಟ್ ನಮನ

By

Published : Oct 31, 2019, 12:32 PM IST

ಬೆಂಗಳೂರು:ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ 35ನೇ ಪುಣ್ಯ ಸ್ಮರಣೆ ಹಾಗೂ ದಿವಂಗತ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನದ ನಿಮಿತ್ತ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್​​ ವರಿಷ್ಠ ದೇವೇಗೌಡರು ಟ್ವಿಟ್ಟರ್​​ನಲ್ಲಿ ತಮ್ಮ ನಮನ ಸಲ್ಲಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಇಂದಿರಾಗಾಂಧಿ ಅವರ 35ನೇ ಪುಣ್ಯಸ್ಮರಣೆ ಸಂದರ್ಭದಲ್ಲಿ ಅವರಿಗೆ ನನ್ನ ಪ್ರಾಮಾಣಿಕ ಗೌರವ ಸಲ್ಲಿಸುತ್ತೇನೆ. ಭಾರತದ ಸಾರ್ವಭೌಮತ್ವ, ಸ್ವಾಯತ್ತತೆ ಮತ್ತು ಎಲ್ಲಾ ಕ್ಷೇತ್ರಗಳಲ್ಲಿನ ಸ್ವಾವಲಂಬನೆಗಾಗಿ ಅವರ ಬದ್ಧತೆಯು ಭಾರತವನ್ನು ವಿಶ್ವದಲ್ಲಿ ಸ್ಪರ್ಧಿಸಲು ಅನುವು ಮಾಡಿಕೊಟ್ಟಿದೆ. ನೆರೆಯ ರಾಷ್ಟ್ರಗಳೊಂದಿಗಿನ ಅವರ ಅಂತಾರಾಷ್ಟ್ರೀಯ ಸಂಬಂಧಗಳು ಅನೇಕರಿಗೆ ಪಾಠವಾಗಬೇಕು ಎಂದು ತಿಳಿಸಿದ್ದಾರೆ.

ಅಖಂಡ ಭಾರತದ ಕನಸು ನನಸಾಗಿಸಿದ 'ಉಕ್ಕಿನ ಮನುಷ್ಯ' ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಹುಟ್ಟುಹಬ್ಬದ ಗೌರವದ ನಮನ ಸಲ್ಲಿಸುವೆ. ಜಾತ್ಯತೀತ ಭಾರತ ನಿರ್ಮಾಣಕ್ಕೆ ಅಡ್ಡಿಯಾಗಬಲ್ಲ ಕೋಮುಶಕ್ತಿಗಳನ್ನು ಪ್ರಾರಂಭದಲ್ಲಿಯೇ ಗುರುತಿಸಿದ್ದ ಹೆಮ್ಮೆಯ ಕಾಂಗ್ರೆಸಿಗನ ದೂರದೃಷ್ಟಿ ನಮ್ಮೆಲ್ಲರದ್ದಾಗಲಿ ಎಂದು ಹೇಳಿದ್ದಾರೆ.

ಇನ್ನು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಟ್ವೀಟ್​​ ಮಾಡಿದ್ದು, ದೂರಗಾಮಿ ಹಾಗೂ ಪರಿಣಾಮಕಾರಿ ಚಿಂತನೆಗಳೊಂದಿಗೆ ದೇಶದ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಂತಹ ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 560 ಕ್ಕೂ ಹೆಚ್ಚಿನ ರಾಜಪ್ರಭುತ್ವದ ಸಂಸ್ಥಾನಗಳನ್ನು ಭಾರತದ ಒಕ್ಕೂಟದ ಒಳಗಡೆ ವಿಲೀನಗೊಳಿಸಿದ ಪಟೇಲರ ದೂರದೃಷ್ಡಿಯ ರಾಜಕಾರಣಕ್ಕೆ ಭಾರತೀಯರೆಲ್ಲರೂ ಸದಾ ಚಿರ ಋಣಿಗಳಾಗಿರಬೇಕು ಎಂದು ಹೇಳಿದ್ದಾರೆ.

ABOUT THE AUTHOR

...view details