ಬೆಂಗಳೂರು: ಸ್ಪೀಕರ್ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಸ್ಪೀಕರ್ ಪಕ್ಷಾತೀತವಾಗಿ ನಡೆದುಕೊಳ್ಳಬೇಕು. ಬೊಮ್ಮಾಯಿ ಮೇಲೆ ನಿರೀಕ್ಷೆಯಿತ್ತು. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದೆ ಅಂದುಕೊಂಡಿದ್ದೆ. ಆದರೆ, ಸಿಎಂ ಆರ್ಎಸ್ಎಸ್ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆ ಅಧಿವೇಶನ ಮುಕ್ತಾಯದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ತನ್ನ ಉದ್ದೇಶ ಈಡೇರಿಕೆಗೆ ಅಧಿವೇಶನ ಕರೆದಿತ್ತು. ಜನರ ಸಮಸ್ಯೆ ಬಗ್ಗೆ ಇವರಿಗೆ ಕಾಳಜಿ ಇಲ್ಲ. ನಾವು ಜನರ ಸಮಸ್ಯೆಗಳನ್ನು ಚರ್ಚಿಸುವ ಆಶಯ ಹೊಂದಿದ್ದವು. ಯಾವುದೇ ರೀತಿಯಲ್ಲೂ ಧರಣಿ ಪ್ರತಿಭಟನೆ ನಡೆಸದೇ ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕು ಎಂದು ತೀರ್ಮಾನಿಸಿದ್ದೆವು. ಆದರೆ, ಸರ್ಕಾರದ ನಡೆ ಬೇಸರ ತರಿಸಿದೆ ಹಾಗಾಗಿ ಬಾವಿಗಿಳಿಯಬೇಕಾಗಿ ಬಂತು ಎಂದರು.
ಕನಿಷ್ಠ 20 ದಿನ ಕಲಾಪ ನಡೆಸುವಂತೆ ಹೇಳಿದ್ದೆ, ಬಿಎಸಿ ಸಭೆ ಮಾಡಿ ತೀರ್ಮಾನಿಸುವುದಾಗಿ ತಿಳಿಸಿದ್ದರು. ಆದರೆ, ಬಿಎಸಿ ಸಭೆಯನ್ನ ಕರೆಯಲೇ ಇಲ್ಲ. ಕೊನೆಗೆ 5 ದಿನ ವಿಸ್ತರಣೆಗೆ ಪತ್ರ ಬರೆದಿದ್ದೆ. ಸರ್ಕಾರ ಒಪ್ಪುತ್ತಿಲ್ಲ ಎಂದು ಸ್ಪೀಕರ್ ಹೇಳಿದ್ದರು. ಈಗ ರಾಷ್ಟ್ರೀಯ ಶಿಕ್ಷಣ ನೀತಿ ಪಾಲಿಸಿ ಚರ್ಚೆಯಾಗಬೇಕು. ಇವತ್ತು ಪಾಲಿಸಿ ಚರ್ಚೆಗೆ ಅವಕಾಶ ಕೊಡಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ನಿರೀಕ್ಷೆ ಹುಸಿಯಾಗಿದೆ