ಕರ್ನಾಟಕ

karnataka

ETV Bharat / state

ಕೇಂದ್ರ ಸರ್ಕಾರ ದೇಶವನ್ನು ಲೂಟಿ ಮಾಡುತ್ತಿದೆ: ಸಿದ್ದರಾಮಯ್ಯ - karnataka session

ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಇಳಿದಿದ್ದರೂ ದುಬಾರಿ ಸುಂಕ ವಿಧಿಸುವ ಮೂಲಕ ಪೆಟ್ರೋಲ್, ಡೀಸೆಲ್ ದರಗಳನ್ನು‌ ಮಿತಿ ಮೀರಿ ಹೆಚ್ಚಿಸಲಾಗಿದೆ. ಕಚ್ಚಾ ಬ್ಯಾರಲ್ ತೈಲಕ್ಕೆ ನೂರಾ ಐದು ಡಾಲರ್ ಬೆಲೆ ಇದ್ದಾಗ ಲೀಟರ್​ಗೆ ಪೆಟ್ರೋಲ್ ಬೆಲೆ 78 ರೂ. ಗಳಷ್ಟಿತ್ತು. ಆದರೆ 65 ಡಾಲರ್ ಬೆಲೆ ಇದ್ದಾಗ 93 ರೂ. ಗಳಾಗಿವೆ ಎಂದು ಸದನದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದರು.

Siddaramaiah Outrage against petrol rates increased
ದೇಶವನ್ನು ಲೂಟಿ ಮಾಡುತ್ತಿರುವ ಕೇಂದ್ರ ಎಂದ ಸಿದ್ದರಾಮಯ್ಯ

By

Published : Mar 19, 2021, 5:54 PM IST

ಬೆಂಗಳೂರು: ಪೆಟ್ರೋಲ್, ಡೀಸೆಲ್ ದರಗಳನ್ನು ಮಿತಿಮೀರಿ ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶವನ್ನು ಲೂಟಿ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಇಂದು ನಿಯಮ 69 ರಡಿಯಲ್ಲಿ ಮಾತನಾಡಿದ ಅವರು, ಅಚ್ಚೇ ದಿನ್ ಬರುತ್ತದೆ ಎಂದು ಹೇಳಿದ ಕೇಂದ್ರ ಸರ್ಕಾರ ಜನದ್ರೋಹ ಮಾಡಿದೆ ಎಂದು ದೂರಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಇಳಿದಿದ್ದರೂ ದುಬಾರಿ ಸುಂಕ ವಿಧಿಸುವ ಮೂಲಕ ಪೆಟ್ರೋಲ್, ಡೀಸೆಲ್ ದರಗಳನ್ನು‌ ಮಿತಿ ಮೀರಿ ಹೆಚ್ಚಿಸಲಾಗಿದೆ. ಕಚ್ಚಾ ಬ್ಯಾರಲ್ ತೈಲಕ್ಕೆ ನೂರಾ ಐದು ಡಾಲರ್ ಬೆಲೆ ಇದ್ದಾಗ ಲೀಟರ್​ಗೆ ಪೆಟ್ರೋಲ್ ಬೆಲೆ 78 ರೂ. ಗಳಷ್ಟಿತ್ತು. ಆದರೆ 65 ಡಾಲರ್ ಬೆಲೆ ಇದ್ದಾಗ 93 ರೂ. ಗಳಾಗಿವೆ ಎಂದರು.

ದೇಶವನ್ನು ಲೂಟಿ ಮಾಡುತ್ತಿರುವ ಕೇಂದ್ರ ಎಂದ ಸಿದ್ದರಾಮಯ್ಯ

ಯುಪಿಎ ಸರ್ಕಾರದ ಅವಧಿಯಲ್ಲಿ ಲೀಟರ್ ಪೆಟ್ರೋಲ್ ಮೇಲೆ 9 ರೂ. ಅಬಕಾರಿ ಸುಂಕ ವಿಧಿಸಲಾಗಿತ್ತು. ಆದರೆ, ಈಗ ಅದು 32 ರೂ.ಗಳಿಗೇರಿದೆ. ಇದೇ ರೀತಿ ಲೀಟರ್ ಡೀಸೆಲ್ ಮೇಲಿನ ಅಬಕಾರಿ ಸುಂಕ ಯುಪಿಎ ಸರ್ಕಾರದ ಅವಧಿಯಲ್ಲಿ 3 ರೂ.ಗಳಷ್ಟಿತ್ತು. ಆದರೆ ಈಗ 31 ರೂ.ಗಳಿಗೇರಿದೆ. ಈ ಅಬಕಾರಿ ಸುಂಕವೊಂದರಿಂದಲೇ ರಾಜ್ಯದಲ್ಲಿ 42 ಸಾವಿರ ಕೋಟಿ ರೂ. ಸಂಗ್ರಹಿಸಲಾಗಿದ್ದು, ಇದರಲ್ಲಿ ರಾಜ್ಯದ ಸುಂಕ 16 ಸಾವಿರ ಕೋಟಿ ರೂ., ಕೇಂದ್ರದ ಅಬಕಾರಿ ಸುಂಕದ ಪ್ರಮಾಣ 26 ಸಾವಿರ ಕೋಟಿ ರೂಪಾಯಿ ಎಂದು ವಿವರಿಸಿದರು.

ಕಳೆದೊಂದು ವರ್ಷದಲ್ಲಿ ವಿವಿಧ ತೆರಿಗೆಗಳ ಮೂಲಕ ರಾಜ್ಯದಿಂದ ಕೇಂದ್ರ ಸರ್ಕಾರ 1.18 ಲಕ್ಷ ಕೋಟಿ ರೂ. ಸಂಗ್ರಹಿಸಿದೆ. ಪ್ರತಿಯಾಗಿ ಸಾವಿರ ಕೋಟಿ ರೂ. ಗಳನ್ನೂ ಕೊಟ್ಟಿಲ್ಲ. ಹೀಗೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆಯನ್ನು ಏರಿಕೆ ಮಾಡಿದ್ದರಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನರ ಕೊಳ್ಳುವ ಶಕ್ತಿ ಕಡಿಮೆಯಾಗಿದೆ. ಹೀಗಾಗಿ ಎಲ್ಲೇ ಹೋದರೂ ನಿರಾಶೆಯ ವಾತಾವರಣ ಕಾಣುತ್ತಿದೆ. ಕೊಳ್ಳುವ ಶಕ್ತಿಯಿಲ್ಲದ ಜಾರಣ ಜನ ಅಂಗಡಿ, ಮಾಲ್‌ಗಳಿಗೆ ಹೋಗುತ್ತಿಲ್ಲ ಎಂದರು.

ಕೊಳ್ಳುವ ಶಕ್ತಿ‌ ಇದ್ದರೆ ತಾನೇ ಜನ ಮಾರುಕಟ್ಟೆಗೆ ಹೋಗುವುದು? ಸ್ವತಃ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ನಾವು ಹೇಳಿದರೆ ನೀವು ಬಿಜೆಪಿಯವರು ವಿರೋಧಿಸುತ್ತೀರಿ.ಆದರೆ, ನಿರ್ಮಲಾ ಸೀತಾರಾಮನ್ ಹೇಳಿದ್ದಕ್ಕೆ ಏನು ಉತ್ತರ ನೀಡುತ್ತೀರಿ? ಎಂದು ಕೇಳಿದರು.

ABOUT THE AUTHOR

...view details