ಬೆಂಗಳೂರು:ನಗರದಲ್ಲಿ ಕೊರೊನಾ ಮಹಾಮಾರಿ ಹಾವಳಿ ಹೆಚ್ಚಾಗುತ್ತಿದೆ. ಹೀಗಿದ್ದರೂ ಒಂದಷ್ಟು ವ್ಯಾಪಾರಿಗಳು ಇದಕ್ಕೆ ತಲೆಕೆಡಿಸಿಕೊಳ್ಳುತ್ತಿಲ್ಲ. ಪರಿಣಾಮ ಇಂದು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಹಾಗೂ ಬಿಬಿಎಂಪಿಯ ಸಿಬ್ಬಂದಿ ಮಲ್ಲೇಶ್ವರಂನ 8ನೇ ಕ್ರಾಸ್ ಬಳಿ, ಕೊರೊನಾ ನಿಯಮ ಪಾಲಿಸದ ಒಂದು ಚಿನ್ನದ ಅಂಗಡಿ ಸೇರಿದಂತೆ 5 ಅಂಗಡಿಗಳಿಗೆ ಬೀಗ ಹಾಕಿಸಿದ್ದಾರೆ.
ನಿಯಮ ಉಲ್ಲಂಘಿಸಿದ ಅಂಗಡಿ ಮಾಲೀಕರು: ಶಾಪ್ಗೆ ಬೀಗ ಜಡಿದ ಉತ್ತರ ವಿಭಾಗ ಡಿಸಿಪಿ - corona increased in bengalore
ಇದು ತುಂಬಾ ಗಂಭೀರ ಸಮಯವಾಗಿದ್ದು, ಈ ವೇಳೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲವೆಂದು ಡಿಸಿಪಿ ಶಶಿಕುಮಾರ್ ಹಾಗೂ ಹೆಲ್ತ್ ಇನ್ಸ್‌ಪೆಕ್ಟರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಿಲಿಕಾನ್ ಸಿಟಿಯನ್ನು ಲಾಕ್ಡೌನ್ ಮಾಡಬೇಕೆಂಬ ಕೂಗು ಕೇಳಿಬಂದಿತ್ತು. ಆದರೆ ಸರ್ಕಾರ ಜನರಲ್ಲಿ ಅರಿವು ಮೂಡಿಸುವ ಮುಖಾಂತರ ಕೊರೊನಾವನ್ನು ಕಡಿಮೆ ಮಾಡಲು ನಿರ್ಧಾರ ಮಾಡಿದ್ದು, ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಜನರಲ್ಲಿ ಅರಿವು ಮೂಡಿಸುವಂತೆ ಸೂಚನೆ ನೀಡಿತ್ತು. ಹೀಗಾಗಿ ನಗರದ ಅಂಗಡಿಗಳಿಗೆ ಆಗಮಿಸಿದ ಅಧಿಕಾರಿಗಳು ನಿಯಮ ಪಾಲಿಸದ ವ್ಯಾಪಾರಿಗಳ ಅಂಗಡಿ ಬಾಗಿಲನ್ನು ಮುಚ್ಚಿಸುವ ಕೆಲಸ ಮಾಡಿದ್ದಾರೆ.
ಅಂಗಡಿ ಮಾಲೀಕರು ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಕಾನೂನು ನಿಯಮವನ್ನ ಉಲ್ಲಂಘನೆ ಮಾಡಿದ್ದರು. ಹೀಗಾಗಿ ಮಫ್ತಿಯಲ್ಲಿ ಅಂಗಡಿಗಳಿಗೆ ಆಗಮಿಸಿದ ಪೊಲೀಸರು ಮಾಲೀಕರಿಗೆ ತಿಳಿ ಹೇಳುವ ಮೂಲಕ ಬೀಗ ಜಡಿದು ಎ.ನ್.ಡಿ.ಎಂ.ಎ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿ ದಾಳಿ ಮುಂದುವರಿಸಿದ್ದಾರೆ.
ದಯವಿಟ್ಟು ನಿಯಮಗಳನ್ನ ಪಾಲನೆ ಮಾಡಿ: ಇದು ತುಂಬಾ ಗಂಭೀರ ಸಮಯವಾಗಿದ್ದು, ಈ ವೇಳೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲವೆಂದು ಡಿಸಿಪಿ ಶಶಿಕುಮಾರ್ ಹಾಗೂ ಹೆಲ್ತ್ ಇನ್ಸ್‌ಪೆಕ್ಟರ್ ಸಾರ್ವಜನಿಕರಿಗೆ ಹೇಳಿದ್ದಾರೆ.