ಬೆಂಗಳೂರು:ದೇಶದಾದ್ಯಂತ ಪ್ಲಾಸ್ಟಿಕ್ ಬ್ಯಾನ್ ಆಗಿದ್ರೂ ನಿಯಮ ಉಲ್ಲಂಘಿಸಿ ಅಂಗಡಿ ವ್ಯಾಪಾರಸ್ಥರು ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದನ್ನು ತಿಳಿದ ಮಾಲಿನ್ಯ ನಿಯಂತ್ರಣ ಮಂಡಳಿ, ಕೆಲವು ಅಂಗಡಿ ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಮಂಡಳಿ ಅಧ್ಯಕ್ಷ ಸುಧಾಕರ್, ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದೆ ನಡೆಯುತ್ತಿರೋದನ್ನು ಕಂಡು ಬಳಕೆದಾರರನ್ನು ತರಾಟೆಗೆ ತೆಗೆದುಕೊಂಡರು. ನೀವೇ ಹೀಗೆ ಮಾಡಿದರೆ ಬೀದಿ ವ್ಯಾಪಾರಿಗಳು ಏನು ಮಾಡಬೇಕು ಎಂದು ಎಚ್ಚರಿಕೆ ನೀಡಿದರು. ಸದಾಶಿವನಗರದಲ್ಲಿರುವ ಗೋದರೇಜ್ ನೇಚರ್ ಬ್ಯಾಸ್ಕೆಟ್, ನಾಮ್ದಾರಿ ಫ್ರೆಶ್, ಬ್ರಿಗೇಡ್ ರಸ್ತೆಯಲ್ಲಿರುವ ನೀಲಗಿರಿ ಶಾಪಿಂಗ್ ಮಳಿಗೆಗಳ ಮೇಲೆ ದಿಢೀರ್ ದಾಳಿ ನಡೆಸಿದ ಅವರು, ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು.