ದೊಡ್ಡಬಳ್ಳಾಪುರ:ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಚಿನ್ನಾಭರಣಕ್ಕಾಗಿ ಮನೆಯನ್ನೆಲ್ಲ ಹುಡುಕಾಡಿದ್ದು ಕೊನೆಗೆ ಏನೂ ಸಿಗದಿದ್ದಕ್ಕೆ ಎಟಿಎಂ ಕಾರ್ಡ್ ಕದ್ದೊಯ್ದ ಘಟನೆ ನಗರದಲ್ಲಿ ನಡೆದಿದೆ.
ಚಿನ್ನಾಭರಣಕ್ಕಾಗಿ ಮನೆ ಬೀಗ ಮುರಿದ ಕಳ್ಳರಿಗೇ ಶಾಖ್.. ಅಸಲಿಗೆ ಅಲ್ಲಿ ಏನಾಯ್ತು? - kannada news
ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಬೀಗ ಮುರಿದು ಕಳ್ಳತನ, ಚಿನ್ನಾಭರಣಕ್ಕಾಗಿ ಶೋಧ ನಡೆಸಿ ಏನು ಸಿಗದೆ ಎಟಿಎಂ ಕಾರ್ಡ್ ಕದ್ದೊಯ್ದ ಕಳ್ಳರು.
ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆ ಬೀಗ ಮುರಿದು ಕಳ್ಳತನ
ನಗರದ ನಿವಾಸಿ ಸುರೇಶ್ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಗೆ ಬೀಗ ಹಾಕಿಕೊಂಡುಮದುವೆಗೆಂದು ಕುಟುಂಬ ಸಮೇತ ಹೋಗಿದ್ದ ಹಿನ್ನೆಲೆ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಕೈಚಳಕ ತೋರಿಸಲು ಮುಂದಾಗಿದ್ದಾರೆ. ಚಿನ್ನಾಭರಣಕ್ಕಾಗಿ ಮನೆಯನ್ನೆಲ್ಲಾ ಜಾಲಾಡಿದ್ದು ಏನೂ ಸಿಗದಿದ್ದಾಗ ಕೊನೆಗೆ ಎಟಿಎಂ ಕಾರ್ಡ್ ಕದ್ದು ಪರಾರಿಯಾಗಿದ್ದಾರೆ.
ಎಟಿಎಂನಿಂದ 30 ಸಾವಿರ ಡ್ರಾ ಮಾಡಿದ್ದು, ಮದುವೆಗೆ ಒಡವೆಗಳನ್ನೆಲ್ಲ ತೆಗೆದುಕೊಂಡು ಹೋಗಿದ್ದರಿಂದ ಯಾವುದೇ ಒಡವೆ ಕಳ್ಳರ ಕೈಗೆ ಸಿಕ್ಕಿಲ್ಲ. ಪ್ರಕರಣ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.