ದೇವನಹಳ್ಳಿ :ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು(ಕೆಐಎಬಿ) ಸಂಸ್ಥೆಯಿಂದ ಅಕ್ಟೋಬರ್ 2020ರಲ್ಲಿ 34,339 ಮೆಟ್ರಿಕ್ ಟನ್‍ಗಳಷ್ಟು ಸರಕು ಸಾಗಣೆಕೆಯಾಗಿದೆ. ಇದು ಕಳೆದ 26 ತಿಂಗಳುಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಟನ್ನೇಜ್ ದಾಖಲೆಯಾಗಿದೆ.
ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಹೋಗುವ ಸರಕು ತೂಕ 8,117 ಮೆಟ್ರಿಕ್ ಟನ್‍ಗಳಾಗಿದ್ದು, ಇದುವರೆಗಿನ ಅತ್ಯುನ್ನತ ಪ್ರಮಾಣದ್ದಾಗಿದೆ. 2020-21ರ ಆರ್ಥಿಕ ವರ್ಷದಲ್ಲಿ ಪ್ರಮುಖವಾಗಿ ಬೆಂಗಳೂರು ವಿಮಾನ ನಿಲ್ದಾಣದಿಂದ ಬೇಗನೇ ಕೆಡುವಂತ ಸರಕುಗಳ ಸಾಗಣಿಕೆಯಾಗುತ್ತದೆ. ಅಕ್ಟೋಬರ್ ತಿಂಗಳಲ್ಲಿ ಒಟ್ಟಾರೆ ರಫ್ತುಗಳ ಪೈಕಿ ಇವು ಶೇ.12ರಷ್ಟು ಪಾಲು ಹೊಂದಿವೆ. 1,095 ಮೆಟ್ರಿಕ್ ಟನ್ ಒಟ್ಟು ತೂಕದೊಂದಿಗೆ ಅಕ್ಟೋಬರ್ 2020ರಲ್ಲಿ ಸರಕು ತಲುಪುವ ಸ್ಥಳಗಳ ಪೈಕಿ ದೋಹಾ ಅಗ್ರಸ್ಥಾನದಲ್ಲಿ ಹೊರಹೊಮ್ಮಿದೆ.