ಬೆಂಗಳೂರು: ಡಿ ಜೆ ಹಳ್ಳಿ-ಕೆ ಜಿ ಹಳ್ಳಿ ಗಲಭೆ ಪ್ರಕರಣದ ಆರೋಪಿಯಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಿದ್ದು, ತನಗೆ ವಿಶೇಷ ಸೇವೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜೈಲಿನ ಆಸ್ಪತ್ರೆ ವ್ಯವಸ್ಥೆ ಸರಿಯಿಲ್ಲ ಎಂದ ಮಾಜಿ ಮೇಯರ್: ಹೊರಗಿನ ಹಾಸ್ಪಿಟಲ್ಗೆ ಶಿಫ್ಟ್ ಮಾಡುವಂತೆ ಪಟ್ಟು - ಬೆಂಗಳೂರು ಲೇಟೆಸ್ಟ್ ನ್ಯೂಸ್
ಮಾಜಿ ಮೇಯರ್ ಸಂಪತ್ರಾಜ್ ಜೈಲಿಗೆ ಸೇರಿ ಒಂದು ರಾತ್ರಿಯಷ್ಟೇ ಕ್ವಾರಂಟೈನ್ ಇದ್ದು, ತನಗೆ ಆರೋಗ್ಯ ಸರಿಯಿಲ್ಲವೆಂದು ಜೈಲು ಆಸ್ಪತ್ರೆಯ ಸ್ಪೆಷಲ್ ವಾರ್ಡ್ಗೆ ಶಿಫ್ಟ್ ಆಗಿದ್ದಾರೆ. ಸದ್ಯ ಜೈಲಿನಲ್ಲಿನ ಆಸ್ಪತ್ರೆ ವ್ಯವಸ್ಥೆ ಸರಿಯಿಲ್ಲ ಎಂದು ಕಾರಣ ಕೊಟ್ಟು ಹೊರಗಿನ ಆಸ್ಪತ್ರೆಗೆ ಶಿಫ್ಟ್ ಮಾಡಿ ಅಂತಾ ಪಟ್ಟು ಹಿಡಿದಿದ್ದಾರೆ ಎನ್ನಲಾಗ್ತಿದೆ.
ಕೊರೊನಾ ಇರುವ ಕಾರಣ ಸದ್ಯ ಹೊರಗಿನಿಂದ ಹೋದ ಕೈದಿಗಳು ಕ್ವಾರಂಟೈನ್ ಇರುವುದು ಅನಿವಾರ್ಯವಾಗಿದೆ. ಆದರೆ ಜೈಲಿಗೆ ಸೇರಿ ಒಂದು ರಾತ್ರಿಯಷ್ಟೇ ಕ್ವಾರಂಟೈನ್ ಇದ್ದು, ತನಗೆ ಆರೋಗ್ಯ ಸರಿಯಿಲ್ಲವೆಂದು ಜೈಲು ಆಸ್ಪತ್ರೆಯ ಸ್ಪೆಷಲ್ ವಾರ್ಡ್ಗೆ ಶಿಫ್ಟ್ ಆಗಿದ್ದಾರೆ. ಸದ್ಯ ಜೈಲಿನಲ್ಲಿನ ಆಸ್ಪತ್ರೆ ವ್ಯವಸ್ಥೆಯೇ ಸರಿಯಿಲ್ಲ ಎಂದು ಕಾರಣ ಕೊಟ್ಟು ಹೊರಗಿನ ಆಸ್ಪತ್ರೆಗೆ ಸ್ಥಳಾಂತರಿಸಿ ಎಂದು ಒತ್ತಾಯಿಸುತ್ತಿದ್ದಾರೆ ಎಂದು ಹೇಳಲಾಗ್ತಿದೆ.
ಜೈಲಿಗೆ ಹೋದವರು 8 ದಿನ ಕ್ವಾರಂಟೈನ್ ಇರುವುದು ಕಡ್ಡಾಯವಾಗಿದೆ. ಆದ್ರೆ ಸಂಪತ್ ರಾಜ್ ಆನಾರೋಗ್ಯದ ನೆಪದಲ್ಲಿ ಆಸ್ಪತ್ರೆಗೆ ಶಿಫ್ಟ್ ಆಗಿದ್ದು, ಜೈಲಿನಿಂದ ಹೊರಗಡೆ ಇರುವ ಆಸ್ಪತ್ರೆಗೆ ಬರಲು ಪ್ಲಾನ್ ಹಾಕಿದಂತಿದೆ.