ಬೆಂಗಳೂರು:ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳ ಸರಣಿ ಸಾವು ಸಂಭವಿಸುತ್ತಿದ್ದು, ಜೈಲಿನ ಇತರೆ ಖೈದಿಗಳಿಗೆ ಆತಂಕ ಎದುರಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳ ಸರಣಿ ಸಾವು: ಇತರೆ ಖೈದಿಗಳಿಗೆ ಆತಂಕ! - ಪರಪ್ಪನ ಅಗ್ರಹಾರ ಜೈಲು ಸುದ್ದಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳ ಸರಣಿ ಸಾವು ಸಂಭವಿಸುತ್ತಿದ್ದು, ಒಂದೇ ವಾರದಲ್ಲಿ ಐವರು ಖೈದಿಗಳು ಸಾವನ್ನಪ್ಪಿರುವುದರಿಂದ ಇತರೆ ಖೈದಿಗಳಿಗೆ ಆತಂಕ ಎದುರಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿವಾಹ ವಿಚ್ಛೇದನ ಕೇಸಲ್ಲಿ ಸಜಾ ಬಂಧಿಯಾಗಿದ್ದ ಕೆಂಪಮ್ಮ ಹಾಗೂ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಕಲ್ಲಪ್ಪ,ಅಬ್ದುಲ್ ಹಮೀದ್, ವೀರೇಶ್ ಸೇರಿ ಐವರು ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿದ್ರು. ಜೈಲು ಸಿಬ್ಬಂದಿ ಇಂದು ನ್ಯಾಚುರಲ್ ಡೆತ್ ಎಂದು ಮೃತದೇಹವನ್ನು ವಿಕ್ಟೋರಿಯಾ ಶವಾಗಾರಕ್ಕೆ ರವಾನಿಸಿದ್ದಾರೆ. ಆದರೆ, ಜೈಲಿನಲ್ಲಿರುವ ಇತರೆ ಖೈದಿಗಳು, ಪರಪ್ಪನ ಪರಪ್ಪನ ಅಗ್ರಹಾರದಲ್ಲಿರುವ ಸೋಂಕಿನಿಂದ ಒಂದೇ ವಾರದಲ್ಲಿ ಐವರು ಖೈದಿಗಳು ಸಾವನ್ನಪ್ಪಿರುವ ಗುಮಾನಿ ಹೊರಹಾಕಿದ್ದಾರೆ. ಖೈದಿಗಳ ಅನುಮಾನಾಸ್ಪದ ಸಾವು ಹಿನ್ನಲೆ, ಈ ಬಗ್ಗೆ ನಿಖರ ಕಾರಣ ಹೇಳುವಂತೆ ಖೈದಿಗಳು, ಜೈಲು ಸಿಬ್ಬಂದಿ ಬಳಿ ಮುಗಿಬಿದ್ದಿದ್ದಾರೆ.
ಈ ಸಂಬಂಧ ತನಿಖೆ ನಡೆಸಿ,ರಿಪೋರ್ಟ್ ನೀಡುವಂತೆ ಹಿರಿಯ ಅಧಿಕಾರಿಗಳು ಜೈಲು ಸಿಬ್ಬಂದಿಗೆ ಸೂಚಿಸಿದ್ದಾರೆ.