ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪೊಲೀಸ್ ಠಾಣೆಗಳನ್ನು ಸಂಪೂರ್ಣ ಖಾಕಿ ಕೋಟೆಯಾನ್ನಾಗಿ ಮಾಡಿದ್ದು, ಎರಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಪ್ಯೂ ಜಾರಿ ಮಾಡಲಾಗಿದೆ.
ರಸ್ತೆಗೆ ಬಂದವರನ್ನು ವಾರ್ನಿಂಗ್ ಕೊಟ್ಟು ವಾಪಸ್ ಕಳುಹಿಸಲಾಗುತ್ತಿದ್ದು, ಎರಡು ಪ್ರದೇಶದಲ್ಲಿ ಪರಿಸ್ಥಿತಿ ಹತೋಟಿಗೆ ತರುತ್ತಿದ್ದಾರೆ. ಕೆಜಿ ಹಳ್ಳಿಗೆ ಹೋಗುವ ಪ್ರಮುಖ ದ್ವಾರದಲ್ಲೇ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಸುಮಾರು 1000ಕ್ಕೂ ಹೆಚ್ಚು ಜನ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರೆ, ಘಟನಾ ಸ್ಥಳದಲ್ಲಿ ಓಡಾಡುವವರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ.
ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸೌಮೇಂದ್ರ ಮುಖರ್ಜಿ, ಹೇಮಂತ್ ನಿಂಬಾಳ್ಕರ್ ಈ ಹಿಂದಿನ ಡಿಸಿಪಿ ರಾಹುಲ್ ಶಾಪುರವಾಡ್, ಸಂಚಾರಿ ಜಂಟಿ ಆಯುಕ್ತ ರವಿಕಾಂತೇಗೌಡ, ಡಿಐಜಿ ಡಾ ಹರ್ಷ, ಡಿಸಿಪಿಗಳಾದ ಶರಣಪ್ಪ, ಅನುಚೇತ್, ಭೀಮಾಶಂಕರ ಗುಳೇದ್, ದೇವರಾಜ್, ಧರ್ಮೇಂದ್ರ ಕುಮಾರ್, ಮೀನಾ ಶಶಿಕುಮಾರ್, ರಮೇಶ್ ಬಾನೋತ್, ರೋಹಿಣಿ ಕಟೋಚ್, ರಾಹುಲ್ ಕುಮಾರ್, ರವಿಕುಮಾರ್ ಕೆಪಿ ಸೇರಿ ಒಟ್ಟು ಇಪ್ಪತ್ತು ಐಪಿಎಸ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.