ಕರ್ನಾಟಕ

karnataka

ETV Bharat / state

ಆನೇಕಲ್​ನ ಸಾಹಿತ್ಯ ಸಮ್ಮೇಳನ ಗೌರವಾಧ್ಯಕ್ಷರಾಗಿ ಚಿತ್ರನಟಿ ತಾರಾ ಆಯ್ಕೆ - anekal news

ಆನೇಕಲ್ ತಾಲೂಕಿನ ಎರಡನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚಿತ್ರನಟಿ ತಾರಾ ಅನುರಾಧ ಅವರನ್ನು ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

Second Literary Conference of Anekal Taluk
Second Literary Conference of Anekal Taluk

By

Published : Feb 15, 2020, 3:05 AM IST

ಆನೇಕಲ್​: ಆನೇಕಲ್ ತಾಲೂಕಿನ ಎರಡನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚಿತ್ರನಟಿ ತಾರಾ ಅನುರಾಧ ಅವರನ್ನು ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಕರ್ನಾಟಕ-ತಮಿಳುನಾಡಿನ ಗಡಿ ಭಾಗದ ಅತ್ತಿಬೆಲೆಯ ಜಯಭಾರತಿ ಶಾಲೆಯ ಆವರಣದಲ್ಲಿ ಸಮ್ಮೇಳನ ಚಾಲನೆಗೊಳ್ಳಲಿದೆ. ಈ ಬಾರಿಯ ಸಮ್ಮೇಳನದ ಅಧ್ಯಕ್ಷರಾಗಿ ಇದೇ ತಾಲೂಕಿನ ಮನೆ ಮಗಳಾದ ಖ್ಯಾತ ಚಿತ್ರ ನಟಿ ತಾರಾ ಅನುರಾಧರನ್ನುಆಯ್ಕೆ ಮಾಡಲಾಗಿದೆ. ಜನಪದ ಕಲಾಪ್ರಕಾರಗಳ ಪ್ರದರ್ಶನ, 56 ಶಿಕ್ಷಕರಿಗೆ ಎಪಿ ಗುಂಡಪ್ಪ ಪ್ರಶಸ್ತಿ ಅಲ್ಲದೆ, ಧಾರ್ಮಿಕ, ಕೃಷಿ ಮತ್ತಿತರೆ ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ.

ಆನೇಕಲ್ ತಾಲೂಕಿನ ಎರಡನೇ ಸಾಹಿತ್ಯ ಸಮ್ಮೇಳನ

ಕವಿಗೋಷ್ಟಿ, ಸಾಂಸ್ಕೃತಿಕ ಕಾರ್ಯಕ್ರಮ, ಮೆರವಣಿಗೆ, ವಿಚಾರಗೋಷ್ಠಿ ಪುಸ್ತಕ ಮಳಿಗೆಗಳ ಉದ್ಘಾಟನೆಯನ್ನೊಳಗೊಂಡಂತೆ ಕನ್ನಡ ಪುಸ್ತಕಗಳ ಸಂತೆಯೂ ನಡೆಯಲಿದೆ ಎಂದು ಸಮ್ಮೇಳನದ ಆಯೋಜಕರು ತಿಳಿಸಿದ್ದಾರೆ.

ಅತ್ತಿಬೆಲೆ ಮುಂತಾದೆಡೆ ಹೇರಳವಾಗಿ ಭೂದಾನ ಮಾಡಿದ ಸಾಹುಕಾರ್ ಶರಭಣ್ಣ ಪ್ರಸಸ್ತಿ, ಕಲಾಕೇಸರಿ ಉದಯಕುಮಾರ್, ಹಿರಿಯ ಸಾಹಿತಿ ದಿ ಆನೇಕಲ್ ಕಾಟಿ ಕೃಷ್ಣಮೂರ್ತಿ ಪ್ರಶಸ್ತಿಗಳನ್ನು ನೀಡಿ ಸಾಧಕರಿಗೆ ಗೌರವಿಸಲಾಗುವುದು.

ABOUT THE AUTHOR

...view details