ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಕೋವಿಡ್ ವ್ಯಾಕ್ಸಿನ್ ಎರಡನೇ ಡೋಸ್ ಆರಂಭವಾಗಿದೆ. ಜನವರಿ 16ರಂದು ಮೊದಲ ವ್ಯಾಕ್ಸಿನ್ ಪಡೆದವರಿಗೆ ಇಂದು ಸೆಕೆಂಡ್ ಡೋಸ್ ನೀಡಲಾಗುತ್ತೆ.
ಫೆಬ್ರವರಿ 13ರಂದೇ ರಾಜ್ಯದಲ್ಲಿ ಎರಡನೇ ಹಂತದ ಲಸಿಕೆ ಹಂಚಿಕೆ ಆರಂಭವಾಗಬೇಕಿತ್ತು. ತಾಂತ್ರಿಕ ಕಾರಣದಿಂದ ಸೆಕೆಂಡ್ ಡೋಸ್ ವಿಳಂಬವಾಗಿತ್ತು. ಜನವರಿ 16 ರಂದು ಒಟ್ಟಾರೆ,13,408 ಮಂದಿಗೆ ಲಸಿಕೆ ನೀಡಲಾಗಿತ್ತು. ಇಂದು ಅವರೆಲ್ಲರಿಗೆ ಸೆಕೆಂಡ್ ಡೋಸ್ ಪಡೆಯಲು ಸೂಚಿಸಲಾಗಿದೆ.
ಮೊದಲ ಹಂತದಲ್ಲಿ ಲಸಿಕೆ ಪಡೆದ ಎಲ್ಲರೂ ಎರಡನೇ ಹಂತದಲ್ಲಿ ಲಸಿಕೆ ಪಡೆಯುವುದು ಕಡ್ಡಾಯವಾಗಿದೆ. ಎರಡನೇ ಡೋಸ್ ಪಡೆದ ನಂತರವಷ್ಟೇ ಲಸಿಕೆ ಪೂರ್ಣ ಪ್ರಮಾಣದಲ್ಲಿ ಕೋವಿಡ್ ವಿರುದ್ಧ ರಕ್ಷಣೆ ನೀಡಬಲ್ಲದು. ಮೊದಲ ಹಂತದಲ್ಲಿ ನಿನ್ನೆಯವರೆಗೆ ಒಟ್ಟು 4,09,836 ಆರೋಗ್ಯ ಕಾರ್ಯಕರ್ತರು ಮತ್ತು 86,798 ಮುಂಚೂಣಿ ಕಾರ್ಯಕರ್ತರಿಗೆ ಮೊದಲನೆ ಡೋಸ್ ನೀಡಲಾಗಿದೆ. ಕ್ರಮವಾಗಿ ಶೇ.50 ರಷ್ಟು ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ ಶೇ.30 ರಷ್ಟು ಗುರಿ ಸಾಧಿಸಲಾಗಿದೆ ಎಂದು ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಓದಿ : ಫಾಸ್ಟ್ ಟ್ಯಾಗ್ ಉದ್ದೇಶ, ದೇಶದಲ್ಲಿ ನಕಲಿ ಲೈಸನ್ಸ್ ಬಗ್ಗೆ ನಿತಿನ್ ಗಡ್ಕರಿ ಹೇಳಿದ್ದೇನು?