ಬೆಂಗಳೂರು: ನಟಿ ಸಂಜನಾ ಗಲ್ರಾನಿ ಬಂಧನ ಬೆನ್ನೆಲ್ಲೇ ಆಕೆಯ ಮತ್ತೊಬ್ಬ ಆಪ್ತ ಶೇಕ್ ಫಾಜೀಲ್ಗಾಗಿ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.
ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್: ಸಂಜನಾಳ ಮತ್ತೊಬ್ಬ ಆಪ್ತನಿಗೆ ಬಲೆ ಬೀಸಿದ ಸಿಸಿಬಿ - Inspection at Sanjana home by CCB official
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ಸಂಜನಾ ಗಲ್ರಾನಿಯನ್ನು ವಶಕ್ಕೆ ಪಡೆದಿರುವ ಸಿಸಿಬಿ, ನಟಿಯ ಸಂಪರ್ಕದಲ್ಲಿರುವ ಮತ್ತೊಬ್ಬನಿಗಾಗಿ ಹುಡುಕಾಟ ನಡೆಸುತ್ತಿದೆ.
ಸಂಜನಾ ಮತ್ತೊಬ್ಬ ಆಪ್ತನಿಗೆ ಬಲೆ ಬೀಸಿದ ಸಿಸಿಬಿ
ಈತ ಸಂಜನಾ ಅಲ್ಲದೆ ರಾಹುಲ್ಗೂ ಆಪ್ತನಾಗಿದ್ದು, ಶೇಕ್ ಫಾಜೀಲ್ ಪ್ರಮುಖ ರಾಜಕಾರಣಿಯೊಬ್ಬರ ಬಲಗೈ ಬಂಟ ಎಂದು ಹೇಳಲಾಗ್ತಿದೆ. ಡ್ರಗ್ಸ್ ಪ್ರಕರಣದಲ್ಲಿ ಈತನದ್ದು ಪಾಲಿದೆ ಎಂಬ ಶಂಕೆ ಮೇರೆಗೆ ಈತನಿಗಾಗಿ ಸಿಸಿಬಿ ತೀವ್ರ ಹುಡುಕಾಟ ನಡೆಸಿದೆ.
ಫಾಜೀಲ್ ಬಿಟಿಎಂ ಲೇಔಟ್ನಲ್ಲಿ ವಾಸವಿದ್ದು, ಬಾಲಿವುಡ್, ಸ್ಯಾಂಡಲ್ವುಡ್ ಮಂದಿಯೊಂದಿಗೆ ನಿಕಟ ಸಂಪರ್ಕವಿದೆ ಎನ್ನಲಾಗ್ತಿದೆ. ಈತ ಹಲವಾರು ಡ್ರಗ್ ಪಾರ್ಟಿಯಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ಸದ್ಯ ನಟಿ ಸಂಜನಾಳನ್ನು ಸಿಸಿಬಿ ವಶಕ್ಕೆ ಪಡೆದಿರುವ ಹಿನ್ನೆಲೆ ಅವರ ಆಪ್ತರಿಗಾಗಿ ಶೋಧ ಮುಂದುವರೆಸಿದ್ದಾರೆ.