ಆನೇಕಲ್: ಹೊಸ ವರ್ಷದ ಮೊದಲ ದಿನವಾದ ಇಂದು ಶಾಲೆ-ಕಾಲೇಜುಗಳು ಆರಂಭವಾಗಿದ್ದು, ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಕ್ಕಳನ್ನು ಶಾಲೆಗೆ ಸ್ವಾಗತಿಸಿದರು.
ಇಂದು ಬೆಳಗ್ಗೆ ಶಾಲಾ ಆರಂಭಕ್ಕೆ ಮುನ್ನವೇ ಸಚಿವರು ಶಾಲೆಗೆ ಆಗಮಿಸಿದ್ದರು. ಇದಕ್ಕೆ ವಿದ್ಯಾರ್ಥಿ ಸಮುದಾಯ ಸಂತಸ ವ್ಯಕ್ತಪಡಿಸಿತು. ಈ ವೇಳೆ ವಿದ್ಯಾರ್ಥಿನಿಯೋರ್ವಳು ಸಚಿವರ ಬಳಿ ಮಾತನಾಡುತ್ತಾ, ಕಳೆದ ಕೆಲ ದಿನಗಳಿಂದ ರೂಪಾಂತರ ಕೊರೊನಾ ವೈರಸ್ ಆತಂಕ ಹೆಚ್ಚಾಗಿದೆ. ಇದೀಗ ಶಾಲೆಗಳು ಆರಂಭವಾಗಿರುವುದು ಖುಷಿಯ ವಿಚಾರ. ಮತ್ತೆ ವೈರಸ್ ಹೆಚ್ಚಾಯಿತು ಎಂದು ಶಾಲೆಗಳನ್ನು ಮುಚ್ಚಬೇಡಿ. ನಮಗೆ ನೆಟ್ವರ್ಕ್ ಸಮಸ್ಯೆಯಿದೆ, ಅಷ್ಟೇ ಅಲ್ಲದೆ ಆನ್ಲೈನ್ ತರಗತಿಗಳಿಗೆ ನಮ್ಮ ಪೋಷಕರಿಂದ ಮೊಬೈಲ್ ಕೊಡಿಸಿಕೊಳ್ಳಲು ಕಷ್ಟ ಸಾಧ್ಯವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.