ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಶಾಲೆ ಆರಂಭ ವಿಚಾರ: ಹೆಚ್ಚುವರಿ ಅಭಿಪ್ರಾಯ ಸಂಗ್ರಹಿಸಲು ಮುಂದಾದ ಇಲಾಖೆ

ಕೊರೊನಾ ಹರಡುವ ಭಯದಿಂದಾಗಿ ರಾಜ್ಯದಲ್ಲಿ ಶಾಲೆ ಆರಂಭಿಸುವ ಬಗ್ಗೆ ಇನ್ನೂ ಸಹ ಚರ್ಚೆ ನಡೆಯುತ್ತಿದ್ದು, ಪೋಷಕರೊಂದಿಗೆ ಸಭೆ ನಡೆಸಿ ಹೆಚ್ಚುವರಿ ಅಭಿಪ್ರಾಯ ಸಂಗ್ರಹಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

Representative Image
ಸಾಂದರ್ಭಿಕ ಚಿತ್ರ

By

Published : Nov 11, 2020, 4:14 PM IST

ಬೆಂಗಳೂರು: ರಾಜ್ಯದಲ್ಲಿ ಶಾಲೆ ಆರಂಭದ ವಿಚಾರವಾಗಿ ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆಯು ಹೆಚ್ಚುವರಿ ಅಭಿಪ್ರಾಯ ಸೇಪರ್ಡೆಗೆ ಮುಂದಾಗಿದೆ.

ಆರ್​​​ಟಿಇ ಸ್ಟೂಡೆಂಟ್ಸ್ & ಪೇರೆಂಟ್ಸ್ ಅಸೋಸಿಯೇಷನ್ ಹಾಗೂ ರುಪ್ಸಾ(RUPSA- Recognised unaided private school association) ಜೊತೆಗೂ ಸಹ ಈ ಬಗ್ಗೆ ಸಭೆ ನಡೆಸಲು ಸಿದ್ಧತೆ ನಡೆರದಿದೆ. ಶಾಲೆ ಆರಂಭದ ಕುರಿತು ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರಧಾನ ಕಾರ್ಯದರ್ಶಿ ಉಮಾಶಂಕರ್​​ಗೆ ವರದಿ ಸಲ್ಲಿಕೆ ಮಾಡಲಾಗಿದೆ. ವರದಿ ಸಲ್ಲಿಕೆಯಾದ ಬಳಿಕ ತರಗತಿ ಆರಂಭಿಸುವ ಕುರಿತು ಪಾಲಕರಿಂದ ಅಭಿಪ್ರಾಯ ಸಂಗ್ರಸಿಲ್ಲ ಎಂಬ ದೂರು ಪೋಷಕರಿಂದ ಬಂದ ಹಿನ್ನೆಲೆ, ಶಿಕ್ಷಣ ಇಲಾಖೆ ಹೆಚ್ಚುವರಿ ಸಲಹೆಗೆ ಮತ್ತೊಮ್ಮೆ ಸಭೆ ನಡೆಸಲು ಮುಂದಾಗಿದೆ.

ಈ ಸಭೆಯಲ್ಲಿ ಶಾಲೆಗಳನ್ನು ಪ್ರಾರಂಭಿಸಲು ದಿನಾಂಕ ನಿಗದಿಪಡಿಸುವ ಬಗ್ಗೆ, ಅಗತ್ಯ ಸುರಕ್ಷತಾ ಕ್ರಮ, ಶಾಲೆ ನಡೆಯುವ ಅವಧಿ ಸೇರಿದಂತೆ ಎಲ್ಲ ವಿಚಾರದ ಬಗ್ಗೆ ಚರ್ಚೆ ನಡೆಯಲಿದ್ದು, ಇಲ್ಲಿ ವ್ಯಕ್ತವಾಗುವ ಅಭಿಪ್ರಾಯವನ್ನು ವರದಿಗೆ ಸೇರಿಸಲಾಗುತ್ತದೆ. ಆ ಬಳಿಕ ಅಂತಿಮ ವರದಿಯನ್ನು ಇಲಾಖಾ ಕಾರ್ಯದರ್ಶಿ ಶಿಕ್ಷಣ ಸಚಿವರಿಗೆ ನೀಡಲಿದ್ದಾರೆ.

ಈ ಎಲ್ಲ ಪ್ರಕ್ರಿಯೆಗಳಿಂದಾಗಿ ಸಿಎಂ ಯಡಿಯೂರಪ್ಪರಿಗೆ ವರದಿ ಸಲ್ಲಿಸುವಲ್ಲಿ ವಿಳಂಬವಾಗಲಿದೆ. ಹೀಗಾಗಿ ದೀಪಾವಳಿ ಹಬ್ಬದ ನಂತರವೇ ಶಾಲಾರಂಭದ ದಿನಾಂಕ ನಿಗದಿಯಾಗಲಿದೆ ಎಂದು ತಿಳಿದುಬಂದಿದೆ.

ABOUT THE AUTHOR

...view details