ಕರ್ನಾಟಕ

karnataka

ETV Bharat / state

ಸತ್ಯನಾರಾಯಣ ನಿಧನದಿಂದ ಜೆಡಿಎಸ್​​​​​ಗೆ ತುಂಬಲಾರದ ನಷ್ಟ: ಹೆಚ್​ಡಿಕೆ

ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಸಂದರ್ಭದಲ್ಲಿ ಅವರಿಗೆ ದೊಡ್ಡಮಟ್ಟದಲ್ಲಿ ಬೆಲೆ ಕಟ್ಟಿ ಹಣದ ಆಮಿಷ ಒಡ್ಡಿದ್ದರು. ಅದೆಲ್ಲವನ್ನೂ ಧಿಕ್ಕರಿಸಿ, ಪಕ್ಷದ ನಿಷ್ಠಾವಂತ ಸಿಪಾಯಿಯಾಗಿದ್ದರು. ಅವರ ನಿಧನದಿಂದ ಇವತ್ತು ನನಗೆ ವೈಯಕ್ತಿಕವಾಗಿ ಅಷ್ಟೇ ಅಲ್ಲ, ನಮ್ಮ ಪಕ್ಷಕ್ಕೆ, ಕೃಷಿಕ ವಲಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ದುಃಖ ವ್ಯಕ್ತಪಡಿಸಿದರು.

H. D. Kumaraswamy
ಸತ್ಯನಾರಾಯಣ ನಿಧನ ಜೆಡಿಎಸ್ ಪಕ್ಷಕ್ಕೆ ತುಂಬಲಾರದ ನಷ್ಟ: ಕಂಬನಿ ಮಿಡಿದ ಹೆಚ್​ಡಿಕೆ

By

Published : Aug 5, 2020, 11:14 AM IST

Updated : Aug 5, 2020, 3:25 PM IST

ಬೆಂಗಳೂರು: ನಮ್ಮ ಪಕ್ಷದ ಹಿರಿಯ ನಾಯಕ ಬಿ.ಸತ್ಯನಾರಾಯಣ ಅವರನ್ನು ಕಳೆದುಕೊಂಡಿರುವುದು ತುಂಬಾ ನೋವಿನ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.

ಸತ್ಯನಾರಾಯಣ ನಿಧನದಿಂದ ಜೆಡಿಎಸ್​​​​​ಗೆ ತುಂಬಲಾರದ ನಷ್ಟ: ಕಂಬನಿ ಮಿಡಿದ ಹೆಚ್​ಡಿಕೆ

ನಮ್ಮ ಪಕ್ಷದ ಹಿರಿಯ ನಾಯಕ ದೇವೇಗೌಡರ ಸುದೀರ್ಘ ರಾಜಕಾರಣದಲ್ಲಿ ಅವರ ಸಹಪಾಠಿಯಾಗಿ, ಅವರ ಜೊತೆಯಲ್ಲಿ ಅವರ ಕಷ್ಟ-ಸುಖಗಳಲ್ಲಿ ರಾಜಕೀಯದ ಏಳು ಬೀಳುಗಳಲ್ಲಿ ಅತ್ಯಂತ ನಿಷ್ಠೆ, ಪ್ರಾಮಾಣಿಕತೆಯಿಂದ ಜೊತೆಯಲ್ಲಿ ಹೆಜ್ಜೆ ಹಾಕಿದ್ದರು. ಇತ್ತೀಚಿನ ರಾಜಕಾರಣದಲ್ಲಿ ಪ್ರಾಮಾಣಿಕತೆ, ನಿಷ್ಠೆ ಕಾಣಲು ಸಾಧ್ಯವಿಲ್ಲ. ಆದರೆ ಸತ್ಯನಾರಾಯಣ ಅದೆಲ್ಲದಕ್ಕೂ ಅಪವಾದ ಆಗಿದ್ದರು ಎಂದರು.

ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಸಂದರ್ಭದಲ್ಲಿ ಅವರಿಗೆ ದೊಡ್ಡಮಟ್ಟದಲ್ಲಿ ಬೆಲೆ ಕಟ್ಟಿ ಹಣದ ಆಮಿಷ ಒಡ್ಡಿದ್ದರು. ಅದೆಲ್ಲವನ್ನೂ ಧಿಕ್ಕರಿಸಿ, ಪಕ್ಷದ ನಿಷ್ಠಾವಂತ ಸಿಪಾಯಿಯಾಗಿದ್ದರು. ಅವರ ನಿಧನದಿಂದ ಇವತ್ತು ನನಗೆ ವೈಯಕ್ತಿಕವಾಗಿ ಅಷ್ಟೇ ಅಲ್ಲ, ನಮ್ಮ ಪಕ್ಷಕ್ಕೆ, ಕೃಷಿಕ ವಲಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ದುಃಖ ವ್ಯಕ್ತಪಡಿಸಿದರು.

ಸತ್ಯನಾರಾಯಣ ಅವರ ಪಾರ್ಥಿವ ಶರೀರವನ್ನು ದರ್ಶನ ಮಾಡಬೇಕು ಎಂದುಕೊಂಡಿದ್ದೆ. ಆದರೆ, ವೈದ್ಯರ ಸಲಹೆ ಮೇರೆಗೆ ಅವರ ದರ್ಶನ ಮಾಡಲು ಆಗುತ್ತಿಲ್ಲ ಎಂಬುದೇ ಬೇಸರದ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ವರ್ಗ, ಬಂಧುಗಳು ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಶೋಕ ಸಂದೇಶದಲ್ಲಿ ಕುಮಾರಸ್ವಾಮಿ ತಿಳಿಸಿದ್ದಾರೆ.

Last Updated : Aug 5, 2020, 3:25 PM IST

ABOUT THE AUTHOR

...view details