ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಡ್ರಗ್ಸ್ ಜಾಲದ ಆರೋಪಿಯಾಗಿರುವ ನಟಿ ಸಂಜನಾರ ಇನ್ನೊಂದು ಮುಖವಾಡ ಬಯಲಾಗಿದೆ. ಸಂಜನಾ ಜೈಲು ಸೇರಿದ ದಿನದಿಂದ ಒಂದೇ ಹಠ ಹಿಡಿದಿದ್ದು, ತನಗೆ ಸಿಗರೇಟ್ ಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.
ಸಿಸಿಬಿ ತನಿಖಾಧಿಕಾರಿಗಳ ಎದುರು ತನಗೇನೂ ಮಾದಕ ವಸ್ತುಗಳ ಚಟವಿಲ್ಲ, ತಾನು ಬಹಳ ಮಡಿವಂತೆ ಎಂದು ಪುಂಗಿ ಬಿಡುತ್ತಿದ್ದ ಸಂಜನಾ ಸದ್ಯ ತನ್ನ ಮುಖವಾಡವನ್ನ ಜೈಲಲ್ಲಿ ತೋರಿಸಿದ್ದಾರೆ ಎನ್ನಲಾಗ್ತಿದೆ. ಸದ್ಯ ಜೈಲಿನ ಒಂದೇ ಕೊಠಡಿಯಲ್ಲಿ ನಟಿ ರಾಗಿಣಿ ಹಾಗೂ ಸಂಜನಾ ಇದ್ದು, ಇಬ್ಬರನ್ನ ನೋಡಲು ಇಬ್ಬರು ಮಹಿಳಾ ಕಾನ್ಸ್‌ಟೇಬಲ್ ಅವರನ್ನು ನಿಯೋಜಿಸಲಾಗಿದೆ. ಈ ಇಬ್ಬರ ಬಳಿ ತಮಗೆ ಸಿಗರೇಟ್ ಬೇಕೆಂದು ಸಂಜನಾ ಪಟ್ಟು ಹಿಡಿದಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಈ ಕುರಿತಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಜೈಲಿನ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.