ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಂದೇ ಕೊಠಡಿಯಲ್ಲಿರುವ ಸಂಜನಾ ಮತ್ತು ರಾಗಿಣಿ ಜಗಳವಾಡಿಕೊಂಡಿದ್ದು, ಜೈಲಾಧಿಕಾರಿಗಳು ಇದೀಗ ಇಬ್ಬರಿಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿದ್ದಾರೆ.
ಜೈಲಿನಲ್ಲಿ ಸಂಜನಾ-ರಾಗಿಣಿ ಜಗಳ: ಇಬ್ಬರಿಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ - ಪರಪ್ಪನ ಅಗ್ರಹಾರ ಕಾರಾಗೃಹ
ಸಂಜನಾ ಹಾಗೂ ರಾಗಿಣಿ ಕಳೆದ ರಾತ್ರಿ ಜೈಲು ಸಿಬ್ಬಂದಿಗಳ ಎದುರೇ ಅವಾಚ್ಯ ಶಬ್ದಗಳಿಂದ ಒಬ್ಬರಿಗೊಬ್ಬರು ಬೈದು ಜಗಳ ಮಾಡಿಕೊಂಡಿದ್ದಾರೆ. ಇವರಿಬ್ಬರ ಕಿತ್ತಾಟವನ್ನು ಸಹಿಸಿ ಸಮಾಧಾನಿಸುವಲ್ಲಿ ಸಿಬ್ಬಂದಿಗಳು ಸುಸ್ತಾಗಿದ್ದಾರೆ.
ರಾಗಿಣಿ ಹಾಗೂ ಸಂಜನಾ ಕಳೆದ ರಾತ್ರಿ ಜೈಲು ಸಿಬ್ಬಂದಿಗಳ ಎದುರೇ ಅವಾಚ್ಯ ಶಬ್ದಗಳಿಂದ ಒಬ್ಬರಿಗೊಬ್ಬರು ಬೈದು ಜಗಳ ಮಾಡಿಕೊಂಡಿದ್ದಾರೆ. ಇವರಿಬ್ಬರ ಕಿತ್ತಾಟವನ್ನು ಸಹಿಸಿ ಸಮಾಧಾನಿಸುವಲ್ಲಿ ಸಿಬ್ಬಂದಿ ಸುಸ್ತಾಗಿದ್ದಾರೆ. ಇದರಿಂದ ರಾಗಿಣಿ ಹಾಗೂ ಸಂಜನಾಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆಯನ್ನು ಜೈಲಾಧಿಕಾರಿ ಕಲ್ಪಿಸಿದ್ದಾರೆ.
ಪದೇ ಪದೇ ಜೈಲಿನಲ್ಲಿ ಕಿರಿಕ್ ತೆಗೆದು ರಂಪಾಟ ಮಾಡುವ ಸಂಜನಾ ತನ್ನ ಹುಟ್ಟು ಹಬ್ಬದ ಮುನ್ನಾ ದಿನವೇ ಕಿರಿಕ್ ಮಾಡಿಕೊಂಡಿದ್ದು, ಜೈಲಾಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದರಿಂದ ಇಬ್ಬರು ಸಾಮಾನ್ಯ ಕೈದಿಗಳಿಗೂ ಸೆಕ್ಯೂರಿಟಿ ನೀಡಲಾಗಿದೆ.