ಕರ್ನಾಟಕ

karnataka

ETV Bharat / state

ಡ್ರಗ್ ಕೇಸ್‌: ವಿಚಾರಣೆಗೆ ಸಮಯಾವಕಾಶ ಕೇಳಿದ ಒಬೆರಾಯ್‌ ಪತ್ನಿ ಪ್ರಿಯಾಂಕ ಆಳ್ವಾ - ಸ್ಯಾಂಡಲ್​ವುಡ್​ ಡ್ರಗ್​ ಪ್ರಕರಣ ಸುದ್ದಿ,

ಬಾಲಿವುಡ್ ನಟ ವಿವೇಕ್ ಒಬೆರಾಯ್ ಪತ್ನಿ ಪ್ರಿಯಾಂಕ ಆಳ್ವಾ ಸಿಸಿಬಿ ನೋಟಿಸ್​ಗೆ ಉತ್ತರಿಸಿದ್ದು, ವಿಚಾರಣೆಗೆ ಸಮಯಾವಕಾಶ ಕೇಳಿದ್ದಾರೆ.

Priyanka alva email,  Priyanka alva email to CCB Additional Commissioner, Priyanka alva, Priyanka alva news, Priyanka alva drug news, Sandalwood drug case, Sandalwood drug case 2020, Sandalwood drug case 2020 news, ಪ್ರಿಯಾಂಕ ಆಳ್ವಾ ಇಮೇಲ್​, ಸಿಸಿಬಿ ಹೆಚ್ಚುವರಿ ಆಯುಕ್ತರಿಗೆ ಪ್ರಿಯಾಂಕ ಆಳ್ವಾ ಇಮೇಲ್, ಪ್ರಿಯಾಂಕ ಆಳ್ವಾ, ಪ್ರಿಯಾಂಕ ಆಳ್ವಾ ಸುದ್ದಿ, ಸ್ಯಾಂಡಲ್​ವುಡ್​ ಡ್ರಗ್​ ಪ್ರಕರಣ, ಸ್ಯಾಂಡಲ್​ವುಡ್​ ಡ್ರಗ್​ ಪ್ರಕರಣ ಸುದ್ದಿ, ಸ್ಯಾಂಡಲ್​​ವುಡ್​ ಡ್ರಗ್​ ಪ್ರಕರಣ 2020 ಸುದ್ದಿ,
ನಟ ವಿವೇಕ್ ಒಬೆರಾಯ್ ಪತ್ನಿಯಿಂದ ಸಿಸಿಬಿಗೆ ಉತ್ತರ

By

Published : Oct 28, 2020, 10:12 AM IST

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ ಮಾಫಿಯಾ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರನೇ ಆರೋಪಿ ಯಾಗಿರುವ ಆದಿತ್ಯಾ ಆಳ್ವಾ ಸಹೋದರಿ ಪ್ರಿಯಾಂಕ ಆಳ್ವಾ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಇಮೇಲ್ ಕಳುಹಿಸಿದ್ದು, ವಿಚಾರಣೆ ಎದುರಿಸಲು ಸಮಯಾವಕಾಶ ಕೋರಿದ್ದಾರೆ.

ಚಾಮರಾಜಪೇಟೆ ಬಳಿ ಇರುವ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸುವಂತೆ ಸಿಸಿಬಿ ಅಧಿಕಾರಿಗಳು ಎರಡು ಬಾರಿ ಇವರಿಗೆ ನೋಟಿಸ್ ನೀಡಿದ್ದರು. ಈ ನೋಟಿಸ್ ನೀಡಿದ ಎರಡು ವಾರಗಳ ನಂತರ ವಿಚಾರಣೆಗೆ ಹಾಜರಾಗದೆ ಇಮೇಲ್​ ಕಳುಹಿಸಿದ್ದು, ನನಗೆ ಎರಡು ಪುಟ್ಟ ಮಕ್ಕಳಿದ್ದಾರೆ. ಹಾಗಾಗಿ, ಸದ್ಯ ನನಗೆ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ಮುಂಬೈನಿಂದ ಬೆಂಗಳೂರಿಗೆ ಮಕ್ಕಳನ್ನು ಕರೆದುಕೊಂಡು ಬರಲು ಸಾಧ್ಯವಿಲ್ಲ. ಹಾಗಾಗಿ ಸ್ವಲ್ಪ ದಿನದ ಬಳಿಕ ನಾನು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ಈ ಇಮೇಲ್ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಕಳುಹಿಸಿದ ಕಾರಣ ಮುಂದಿನ ನಿರ್ಧಾರ ಕೈಗೊಳ್ಳಲು ತನಿಖಾಧಿಕಾರಿಗಳು ತೀರ್ಮಾನಿಸಿದ್ದಾರೆ.

ಪಂಚಭಾಷಾ ನಟ ವಿವೇಕ್ ಒಬೆರಾಯ್ ಪತ್ನಿ ಪ್ರಿಯಾಂಕ ಆಳ್ವಾ ಮುಂಬೈಯಲ್ಲಿ ವಾಸವಿದ್ದಾರೆ. ಡ್ರಗ್ ಪ್ರಕರಣ ಬೆಳಕಿಗೆ ಬರ್ತಿದ್ದ ಹಾಗೆ ಆದಿತ್ಯಾ ಆಳ್ವಾ ಮುಂಬೈಗೆ ತೆರಳಿ ಸಹೋದರಿ ಮನೆಯಲ್ಲಿ ಆಶ್ರಯ ಪಡೆದಿರುವ ಬಗ್ಗೆ ಸಿಸಿಬಿಗೆ ಅನಮಾನವಿತ್ತು. ಹೀಗಾಗಿ ಕಳೆದ ವಾರ ಪೊಲೀಸರು ಅವರ ಮನೆಗೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದರು.

ABOUT THE AUTHOR

...view details