ಕರ್ನಾಟಕ

karnataka

ETV Bharat / state

ಮುತ್ತಪ್ಪ ರೈ ಪುತ್ರನಿಗೆ 3ನೇ ಬಾರಿ ಸಿಸಿಬಿ ಬುಲಾವ್... ಬಹುಭಾಷಾ ನಟಿಗೆ ಕಾದಿದೆಯಾ ಕಂಟಕ?

ಮುತ್ತಪ್ಪ ರೈ ಪುತ್ರನಿಗೆ ಮೂರನೇ ಬಾರಿ ಸಿಸಿಬಿ ವಿಚಾರಣೆಗೆ ಕರೆದಿದ್ದು, ರಿಕ್ಕಿಯಿಂದ ಬಹುಭಾಷಾ ನಟಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

CCB again call to Rikki, Rikki investigation again, Rikki investigation again news, Sandalwood drug case, Sandalwood drug case 2020, Sandalwood drug case 2020 news, ರಿಕ್ಕಿ ರೈ ವಿಚಾರಣೆಗೆ ಮತ್ತೆ ಸಿಸಿಬಿ ಕರೆ, ರಿಕ್ಕಿಗೆ ಮತ್ತೆ ಸಿಸಿಬಿ ವಿಚಾರಣೆ, ರಿಕ್ಕಿಗೆ ಮತ್ತೆ ಸಿಸಿಬಿ ವಿಚಾರಣೆ ಸುದ್ದಿ, ಸ್ಯಾಂಡಲ್​ವುಡ್ ಡ್ರಗ್ ಪ್ರಕರಣ, ಸ್ಯಾಂಡಲ್​ವುಡ್ ಡ್ರಗ್ ಪ್ರಕರಣ 2020, ಸ್ಯಾಂಡಲ್​ವುಡ್ ಡ್ರಗ್ ಪ್ರಕರಣ 2020 ಸುದ್ದಿ,
ಮುತ್ತಪ್ಪ ರೈ ಪುತ್ರನಿಗೆ ಮೂರನೇ ಬಾರಿ ಸಿಸಿಬಿ ಬುಲಾವ್

By

Published : Oct 8, 2020, 10:17 AM IST

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಭೂಗತ ಲೋಕಕ್ಕೆ ಕೈ ಹಾಕಿರುವ ವಿಚಾರ ಗೊತ್ತಿದೆ. ಈಗ ಮಾಜಿ ಡಾನ್ ಮುತ್ತಪ್ಪ ರೈ ಮಗನಿಗೆ ಮೂರನೇ ಬಾರಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಸೂಚಿಸಿದೆ.

ಬ್ಯಾಕ್ ಟು ಬ್ಯಾಕ್ ವಿಚಾರಣೆ ಕೈಗೊಳ್ಳುತ್ತಿರುವ ಸಿಸಿಬಿ ಅಧಿಕಾರಿಗಳು ರಿಕ್ಕಿ ರೈ ಮೊಬೈಲ್ ಮತ್ತು ಹಾರ್ಡ್ ಡಿಸ್ಕ್ ಜಪ್ತಿ ಮಾಡಿದ್ದರು. ಈ ಆಧಾರದ ಮೇಲೆ ಸಿಸಿಬಿ ತಂಡ ತನಿಖೆಗೆ ಇಳಿದಿದೆ. ಸದ್ಯ ರಿಕ್ಕಿ ಡ್ರಗ್ಸ್​ ಪೂರೈಕೆ, ಡ್ರಗ್ಸ್​ ಸೇವನೆ ಮಾಡಿಲ್ಲವೆಂಬ ಮಾಹಿತಿ ಹೇಳ್ತಿದ್ದಾನೆ. ಆದರೆ ವಿಚಾರಣೆ ವೇಳೆ ರಿಕ್ಕಿ ಮೊಬೈಲ್​ನಲ್ಲಿದ್ದ ಕೆಲ ಸಂದೇಶಗಳು ಡಿಲೀಟ್ ಮಾಡಿರುವ ವಿಚಾರ ಬಯಲಾಗಿದೆ. ಹೀಗಾಗಿ ಸಿಸಿಬಿ ತಂಡ ರಿಕ್ಕಿಗೆ ಮತ್ತೆ ಬುಲಾವ್​ ಕೊಟ್ಟಿದೆ.

ಮತ್ತೊಂದೆಡೆ ರಿಕ್ಕಿ ಹಾಗೂ ಎ6 ಆರೋಪಿ ಆದಿತ್ಯಾ ಆಳ್ವಾ ಜೊತೆ ನಟಿಯೊಬ್ಬರ ನಂಟಿರುವ ಮಾಹಿತಿ ಸದ್ಯ ತನಿಖಾಧಿಕಾರಿಗಳಿಗೆ ತಿಳಿದು ಬಂದಿದೆ. ಬಹುಭಾಷಾ ನಟಿಯೊಬ್ಬರು ರಿಕ್ಕಿ ಜೊತೆ ಹಾಗೂ ತಲೆಮರೆಸಿಕೊಂಡ ಆದಿತ್ಯಾ ಆಳ್ವಾ ಜೊತೆ ನಿರಂತರ ಸಂಪರ್ಕ ಹೊಂದಿದ್ದಾಳೆ. ಮಾದಕ ಲೋಕದಲ್ಲಿ ಯಾವ ರೀತಿ ಪಾತ್ರ ವಹಿಸಿದ್ದಾಳೆ ಅನ್ನೋದ್ರ ಬಗ್ಗೆ ಮಾಹಿತಿ ಕಲೆಹಾಕಲು ಸಿಸಿಬಿ ಇಂದು ರಿಕ್ಕಿಯನ್ನು ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

ರಿಕ್ಕಿ ಇಂದು ಕೂಡ ವಿಚಾರಣೆಗೆ ಹಾಜರಾಗಲಿದ್ದು, ವಿಚಾರಣೆ ವೇಳೆ ನಟಿಯ ಇನ್ನಷ್ಟು ಮಾಹಿತಿ ಕಲೆಹಾಕಿ ಪಕ್ಕಾ ಸಾಕ್ಷ್ಯಧಾರದ ಮೇಲೆ ನಟಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ. ಆದಿತ್ಯಾ ಆಳ್ವಾ, ವಿರೇನ್ ಖನ್ನಾ ಜೊತೆ ಆಯೋಜನೆ ಮಾಡುತ್ತಿದ್ದ ಪಾರ್ಟಿಯಲ್ಲಿ ಬಹುಭಾಷಾ ನಟಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಕೊಂಚ ತಣ್ಣಗಾಗಿದ್ದ ಡ್ರಗ್ಸ್​ ಮಾಫಿಯಾ ಸದ್ಯ ಬಹುಭಾಷಾ ನಟಿ ಬೆನ್ನತ್ತಿದೆ. ಈ ಹಿಂದೆ ನಟಿ ರಾಗಿಣಿ ಹಾಗೂ ಸಂಜನಾ ಹೆಸರನ್ನ ಪೆಡ್ಲರ್ ‌ಮೊದಲು ಸೂಚಿಸಿದ್ರು. ನಂತರ ಪೊಲೀಸರು ಪ್ರಕರಣ ದಾಖಲಿಸಿ ಮನೆ ಮೇಲೆ ದಾಳಿ ಮಾಡಿ ನಟಿಮಣಿಯರಿಬ್ಬರನ್ನ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

...view details