ಬೆಂಗಳೂರು:ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಕಚೇರಿಯಲ್ಲಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರು ನಟರುಗಳಾದ ಅಕುಲ್ ಬಾಲಾಜಿ, ಸಂತೋಷ್ ಕುಮಾರ್ ಹಾಗೂ ಮಾಜಿ ಶಾಸಕ ಆರ್ ವಿ ದೇವರಾಜ್ ಪುತ್ರ ಯುವರಾಜ್ರನ್ನು ಪ್ರಾಥಮಿಕ ವಿಚಾರಣೆಗೊಳಪಡಿಸಿ, ಕೆಲ ಮಾಹಿತಿ ಪಡೆದು ತೆರಳಿದ್ದಾರೆ.
ಅಕುಲ್ ಬಾಲಾಜಿ, ಸಂತೋಷ್ ಕುಮಾರ್ ಹಾಗೂ ಯುವರಾಜ್ ಸೇರಿ ಮೂವರ ವಿಚಾರಣೆ ಚುರುಕು
ಸದ್ಯ ಇಬ್ಬರು ನಟರಲ್ಲಿ ಒಬ್ಬರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಬೆಳಗ್ಗೆ10 ಗಂಟೆಯಿಂದ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು ಇನ್ನೂ ಕೂಡ ಮುಂದುವರೆದಿದೆ..
ಅಕುಲ್ ಬಾಲಾಜಿ ಸೇರಿದಂತೆ ಮೂವರ ವಿಚಾರಣೆ ಚುರುಕು
ಮೂವರಲ್ಲಿ ಒಬ್ಬರನ್ನ ಸಿಸಿಬಿ ಕಷ್ಟಡಿಗೆ ಪಡೆಯುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸಿಸಿಬಿ ಕಚೇರಿಯಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಇಂದು ಅಥವಾ ಮುಂದೆ ದಿನಗಳಲ್ಲಿ ಆರೋಪಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಸದ್ಯ ಇಬ್ಬರು ನಟರಲ್ಲಿ ಒಬ್ಬರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಬೆಳಗ್ಗೆ10 ಗಂಟೆಯಿಂದ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು ಇನ್ನೂ ಕೂಡ ಮುಂದುವರೆದಿದೆ.