ಕರ್ನಾಟಕ

karnataka

ETV Bharat / state

ಸಕ್ರ ವರ್ಲ್ಡ್ ಆಸ್ಪತ್ರೆಯಿಂದ ರೋಬೋಟಿಕ್ ಸಹಾಯ ನ್ಯೂರೋ ಪುನರ್ವಸತಿ ಕೇಂದ್ರ ಪ್ರಾರಂಭ - ನಟ ರಾಘವೇಂದ್ರ ರಾಜ್​​ಕುಮಾರ್

ಕರ್ನಾಟಕದಲ್ಲೇ ಮೊದಲ ಬಾರಿಗೆ ವಿಶ್ವ ದರ್ಜೆಯ ರೋಬೋಟಿಕ್ ಸಹಾಯ ನ್ಯೂರೋ ಪುನರ್ವಸತಿ ಕೇಂದ್ರವನ್ನ ಸಕ್ರ ವರ್ಲ್ಡ್ ಆಸ್ಪತ್ರೆಯು ಬೆಂಗಳೂರು ನಗರದಲ್ಲಿ ಆರಂಭಿಸಿದೆ..

ಸಕ್ರ ವರ್ಲ್ಡ್ ಆಸ್ಪತ್ರೆ
ಸಕ್ರ ವರ್ಲ್ಡ್ ಆಸ್ಪತ್ರೆ

By

Published : Dec 12, 2021, 8:35 PM IST

ಬೆಂಗಳೂರು :ನಗರದ ಸಕ್ರ ವರ್ಲ್ಡ್ ಆಸ್ಪತ್ರೆಯು ಕರ್ನಾಟಕದಲ್ಲೇ ಮೊದಲ ಬಾರಿಗೆ ವಿಶ್ವ ದರ್ಜೆಯ ರೋಬೋಟಿಕ್ ಸಹಾಯ ನ್ಯೂರೋ ಪುನರ್ವಸತಿ ಕೇಂದ್ರ ಪ್ರಾರಂಭಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಶ್ವತ್ಥ್‌ ನಾರಾಯಣ್ ಹಾಗೂ ನಟ, ನಿರ್ಮಾಪಕ ರಾಘವೇಂದ್ರ ರಾಜಕುಮಾರ್​ ಉದ್ಘಾಟಿಸಿದರು.

ರೋಬೋಟಿಕ್ ಸಹಾಯ ನ್ಯೂರೋ ಪುನರ್ವಸತಿ ಕೇಂದ್ರ ಪ್ರಾರಂಭ

ಬಳಿಕ ಮಾತನಾಡಿದ ಸಚಿವ ಅಶ್ವತ್ಥ್‌ ನಾರಾಯಣ ಅವರು, ಸಕ್ರ ವರ್ಲ್ಡ್ ಆಸ್ಪತ್ರೆಯ ಈ ಹೊಸ ರೋಬೋಟಿಕ್ ಅಸಿಸ್ಟೆಡ್ ನ್ಯೂರೋ ಪುನರ್ವಸತಿ ಕೇಂದ್ರದಿಂದ ಪ್ರತಿಯೊಬ್ಬರೂ ಆರೋಗ್ಯದಲ್ಲಿ ರಕ್ಷಣೆ ಕಾಣಬಹುದು.

ವಿಶ್ವದ ಅತ್ಯುತ್ತಮ ರೋಬೋಟಿಕ್ ಪುನರ್ವಸತಿ ಘಟಕಗಳು ವಾಕ್ ಬಾಟ್ ಪ್ರೀಮಿಯಂ ಅರ್ಮೀಯೋ ಸ್ಟ್ರಿಂಗ್ ಮತ್ತು ಸೆನ್ಸೋ ಆಧುನಿಕ ತಂತ್ರಜ್ಞಾನವನ್ನು ಬಳಸಿ ಮಾನವನ ಚಲನೆಯ ಚಿಕಿತ್ಸೆಗಾಗಿ ಪರಿಹಾರ ನೀಡಲಿದೆ ಎಂದರು.

ಸಕ್ರ ಪುನರ್ವಸತಿ ಕೇಂದ್ರವು ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದಿಂದ ಭಾರತದ ಮೊದಲ ಚಿನ್ನದ ವಿಜೇತ ಪಲ್ಮನರಿ ಪುನರ್ವಸತಿ ಕಾರ್ಯಕ್ರಮಕ್ಕಾಗಿ ಗುರುತಿಸಲ್ಪಟ್ಟಿದೆ ಎಂದು ತಿಳಿಸಿದರು.

ನಟ ರಾಘವೇಂದ್ರ ರಾಜ್​​ಕುಮಾರ್ ಮಾತನಾಡಿ, ಈ ಹಿಂದೆ ಜನರು ಸುಧಾರಿತ ಪುನರ್ವಸತಿ ಚಿಕಿತ್ಸೆಗಾಗಿ ಹೊರದೇಶಗಳಿಗೆ ಹೋಗಬೇಕಾಗಿತ್ತು. ಆದರೆ ಬೆಂಗಳೂರಿನ ಸಕ್ರ ವರ್ಲ್ಡ್ ಆಸ್ಪತ್ರೆಯು ವಿಶ್ವ ದರ್ಜೆಯ ರೋಬೋಟಿಕ್ ಸಹಾಯ ನ್ಯೂರೋ ಪುನರ್ವಸತಿ ಕೇಂದ್ರ ಪ್ರಾರಂಭಿಸಿದ್ದರಿಂದ ರಾಜ್ಯದ ಜನರು ಉನ್ನತ ಮಟ್ಟದ ಆರೈಕೆಯನ್ನು ಪಡೆಯುವುದರ ಜೊತೆಗೆ ರೋಗಿಗಳಿಗೆ ಕುಟುಂಬದ ಆರೈಕೆ ಬಹಳ ಮುಖ್ಯ ಎಂದರು.

ABOUT THE AUTHOR

...view details