ಕರ್ನಾಟಕ

karnataka

ETV Bharat / state

ಮಾಜಿ ಸಿಎಂ v/s ಮಾಮು.. ಅಧಿಕಾರವಿರದೆ ಅತೃಪ್ತ ಆತ್ಮವಾದ ಸಿದ್ದರಾಮಯ್ಯ : ಡಿವಿಎಸ್ ಟ್ವೀಟಿನ ಏಟು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪದೇಪದೆ ಟ್ವೀಟ್ ವಾರ್ ನಡೆಸುವ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಈಗ ಮತ್ತೊಂದು ಸುತ್ತಿನ‌ ಟ್ವೀಟ್ ಕದನ ಆರಂಭಿಸಿದ್ದಾರೆ. ನೇರವಾಗಿ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿ ಟ್ವೀಟ್ ದಾಳಿ ನಡೆಸುತ್ತಿದ್ದಾರೆ.

sadananda gowda

By

Published : Apr 20, 2019, 12:09 PM IST

ಬೆಂಗಳೂರು:ಅತೃಪ್ತ ಆತ್ಮವನ್ನು ಪೂಜೆಯಿಂದ ಉಚ್ಛಾಟನೆ ಮಾಡಬೇಕು. ರಾಜಕೀಯ ಅತೃಪ್ತ ಆತ್ಮವನ್ನು ಪ್ರಜೆಗಳಿಂದ ಉಚ್ಛಾಟನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪದೇಪದೆ ಟ್ವೀಟ್ ವಾರ್ ನಡೆಸುವ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಈಗ ಮತ್ತೊಂದು ಸುತ್ತಿನ‌ ಟ್ವೀಟ್ ಕದನ ಆರಂಭಿಸಿದ್ದಾರೆ. ನೇರವಾಗಿ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿಕೊಂಡು ಟ್ವೀಟ್ ದಾಳಿ ನಡೆಸುತ್ತಿದ್ದಾರೆ.

ಆಚಾರವಿಲ್ಲದ ನಾಲಿಗೆ ನಿನ್ನ
ನೀಚ ಬುದ್ಧಿಯ ಬಿಡು ನಾಲಿಗೆ||
ವಿಚಾರವಿಲ್ಲದೆ ಪರರ ದೂಷಿಸುವುದಕ್ಕೆ
ಚಾಚಿ ಕೊಂಡಿರುವಂತ ನಾಲಿಗೆ-ಪುರಂದರದಾಸರು
ಇವರಿಗೆ ಮೊದಲೇ ಗೊತ್ತಿತ್ತೋ ಏನೋ ಸಿದ್ದರಾಮಯ್ಯರಂತ ರಾಜಕೀಯ ಅತೃಪ್ತ ಆತ್ಮ ಮುಂದೆ ಕನ್ನಡ ನಾಡಲ್ಲಿ ಹುಟ್ಟುತ್ತೆ ಅಂತ! ಪ್ರಧಾನಮಂತ್ರಿಗಳ ಬಗ್ಗೆ ಕೀಳಾಗಿಮಾತಾಡೋ ಆತ್ಮಗಳು ರಾಜಕೀಯಕ್ಕೆ ಹೊಲಸು ಎಂದು ಸದಾನಂದಗೌಡ ಮೊದಲ ಟ್ವೀಟ್ ಮಾಡಿ ಸಿದ್ದರಾಮಯ್ಯ ಕಾಲೆಳೆದಿದ್ದಾರೆ.

ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ನಾನೇ ಅಂತಾ ಅತೃಪ್ತ ಆತ್ಮ ಸಿದ್ದರಾಮಯ್ಯ ಘೋಷಿಸಿಕೊಂಡದ್ದು, HMT (ಹಾಸನ,ಮಂಡ್ಯ,ತುಮಕೂರು) ಕ್ಷೇತ್ರದಲ್ಲಿ ಮತದಾನ ನಡೆದ ಮೇಲೆ. ಈಗ ಹೇಳಿ ಸ್ವಾಮಿ ಇದು ಮೈತ್ರಿ ಸರ್ಕಾರದ ಪತನದ ಮುನ್ಸೂಚನೆಯಾ ? HMT ಕ್ಷೇತ್ರದಲ್ಲಿ ಬರಲಿರುವ ಫಲಿತಾಂಶವನ್ನು ಊಹಿಸಿ ಹೇಳಿದ ಮಾತಾ ? ನಿಮ್ಮ ಕಾರ್ಯಾಚರಣೆ ಸಫಲವಾಗಿರೋ ಖುಷಿಯೋ ಎಂದು ಮತ್ತೊಂದು ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.

ಅತೃಪ್ತ ಆತ್ಮಗಳು ಸದ್ಗತಿ ದೊರೆಯದೆ ಸಜ್ಜನರಿಗೆ ಕೆಲಕಾಲ ಕೀಟಲೆ ಕೊಡುತ್ತವೆ ಅಂತಾ ಹಿರಿಯರು, ತಿಳಿದವರು ಹೇಳಿದ ನೆನಪು. ಅಧಿಕಾರ ವಂಚಿತ ರಾಜಕೀಯ ಅತೃಪ್ತ ಆತ್ಮವೊಂದು ಸಜ್ಜನ ಪ್ರಧಾನಿ ಬಗ್ಗೆ ಕೀಳು ಮಾತಲ್ಲಿ ಬಡಬಡಾಯಿಸುವುದು ನೋಡಿ ಹಿರಿಯರು ಹೇಳಿದ್ದು ಸರಿ ಅನಿಸುತ್ತಿದೆ. ಎರಡಕ್ಕೂ ಉಚ್ಛಾಟನೆಯೇ ಪರಿಹಾರ ಪೂಜೆಯಿಂದ ಉಚ್ಚಾಟನೆ, ಪ್ರಜೆಗಳಿಂದ ಉಚ್ಛಾಟನೆ ಎಂದು ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿದ್ದಾರೆ.

ABOUT THE AUTHOR

...view details