ಬೆಂಗಳೂರು : ಕೋರ್ ಕಮಿಟಿ ಅನ್ನೋದು ಒಂದು ಹಿರಿಯರ ತಂಡ. ಕೋರ್ ಕಮಿಟಿ ಜೊತೆ ಚರ್ಚಿಸಿ ರಾಜ್ಯ ಪದಾಧಿಕಾರಿಗಳ ನೇಮಕದ ತೀರ್ಮಾನ ಆಗಿದ್ದರೆ ಇನ್ನೂ ಸದೃಢವಾದ ತಂಡಲು ಕಟ್ಟಲು ಸಾಧ್ಯವಾಗಬಹುದಿತ್ತು. ಉತ್ತರ ಕರ್ನಾಟಕ ಭಾಗಕ್ಕೆ ಮತ್ತಷ್ಟು ಒತ್ತು ಕೊಡಬೇಕಿತ್ತು ಎಂದು ಬಿಜೆಪಿ ಹೈಕಮಾಂಡ್ ಬಗ್ಗೆ ಮಾಜಿ ಸಿಎಂ ಡಿ.ವಿ ಸದಾನಂದಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಜಯನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ನೂತನ ಪದಾಧಿಕಾರಿಗಳ ನೇಮಕವಾಗಿದೆ. ಈ ಟೀಮ್ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋದರೆ ಖಂಡಿತ ಯಶಸ್ವಿಯಾಗುತ್ತದೆ. ಮತ್ತೆ ಏನಾದರೂ ಹಳೆ ಚಾಳಿ ಮುಂದುವರಿಸಿದರೆ ಅದು ಪಕ್ಷದ ಮೇಲೆ ಸಮಸ್ಯೆ ಆಗುತ್ತದೆ. ದಕ್ಷಿಣ ಭಾಗಕ್ಕೆ ಹೆಚ್ಚು ಆದ್ಯತೆ ಸಿಕ್ಕಿದೆ. ಆದರೆ, ಉತ್ತರ ಕರ್ನಾಟಕ ಭಾಗಕ್ಕೆ ಸರಿಯಾಗಿ ಸಿಕ್ಕಿಲ್ಲ ಎಂಬ ಮಾತುಗಳು ಇವೆ. ಈ ತಂಡವನ್ನು ಅಸಮರ್ಥ ಅಂತಾ ಹೇಳಲ್ಲ. ಆದರೆ, ಅಲ್ಲೋ ಇಲ್ಲೋ ಸ್ವಲ್ಪ ವ್ಯತ್ಯಾಸಗಳು ಇವೆ. ಇದನ್ನೆಲ್ಲಾ ಮಾಡೋಕು ಮುನ್ನ ಕೇಂದ್ರದ ನಾಯಕರು ಬಂದು ರಾಜ್ಯದ ಹಿರಿಯರ ಜೊತೆ ಕುಳಿತು ತಿಳಿದುಕೊಳ್ಳಬೇಕಿತ್ತು. ಅವರಿಂದ ಹೊಸ ವಿಷಯ ತಗೊಂಡು ಟೀಮ್ ಮಾಡಬೇಕಿತ್ತು. ಇವತ್ತು ಅವರನ್ನು ಕರೆದು ಮಾತಾಡಿದ್ದರೆ ಅತೃಪ್ತರ ಸಮಸ್ಯೆ ಇರುತ್ತಿರಲಿಲ್ಲ ಎಂದು ಬೇಸರ ಹೊರಹಾಕಿದರು.
ಇದನ್ನೂ ಓದಿ :ನಾವು ಜಾತಿಗಣತಿ ವಿರೋಧಿಗಳಲ್ಲ, ವರದಿಯು ವಾಸ್ತವ, ಸತ್ಯದಿಂದ ಕೂಡಿರಬೇಕು: ಸಚಿವ ಈಶ್ವರ್ ಖಂಡ್ರೆ