ಬೆಂಗಳೂರು:ಕಾರವಾರ, ಜೋಯಿಡಾ ಗೋವಾಗೆ ಸೇರಬೇಕು ಎನ್ನುವುದು ಅಪ್ರಸ್ತುತ ಎಂದು ಮಾಜಿ ಸಚಿವ ಆರ್. ವಿ. ದೇಶಪಾಂಡೆ ತಿಳಿಸಿದ್ದಾರೆ.
ಕಾರವಾರ, ಜೋಯಿಡಾ ಗೋವಾಗೆ ಸೇರಬೇಕು ಎನ್ನುವದು ಅಪ್ರಸ್ತುತ: ಆರ್. ವಿ. ದೇಶಪಾಂಡೆ - ಮಾಜಿ ಸಚಿವ ಆರ್ ವಿ ದೇಶಪಾಂಡೆ
ಕಾರವಾರ, ಜೋಯಿಡಾ ಗೋವಾಗೆ ಸೇರಬೇಕು ಎನ್ನುವದು ಅಪ್ರಸ್ತುತ ಎಂದು ಮಾಜಿ ಸಚಿವ ಆರ್. ವಿ. ದೇಶಪಾಂಡೆ ತಿಳಿಸಿದ್ದಾರೆ. ಅಲ್ಲದೇ ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಮಾಜಿ ಸಚಿವ ಆರ್ ವಿ ದೇಶಪಾಂಡೆ
ಹಳಿಯಾಳ ಶಾಸಕರು ಆಗಿರುವ ಮಾಜಿ ಸಚಿವರು ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ಕೊಂಕಣಿ ಭಾಷಿಕರು ರಾಜ್ಯದಲ್ಲಿ ನೆಮ್ಮದಿಯಿಂದ ಇದ್ದಾರೆ. ಕೊಂಕಣಿ ಮಂಚ್ ಆಗ್ರಹ ಸಮಂಜಸವಲ್ಲ. ಈ ಭಾಗದ ಜನರು ಶಾಂತಿ, ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರ್ಕಾರದ ಸೌಲಭ್ಯ ಪಡೆದು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. ಇವರ ಹಾಗೂ ಈ ವಿಚಾರದಲ್ಲಿ ಇನ್ನಷ್ಟು ಪ್ರಯತ್ನ ಮಾಡುವ ಅಗತ್ಯ ಇಲ್ಲ. ಕೊಂಕಣಿ ಮಂಚ್ ತನ್ನ ವಿಚಾರವನ್ನು ಇಲ್ಲಿಗೆ ಕೈ ಬಿಡುವುದು ಒಳಿತು ಎಂದು ತಿಳಿಸಿದ್ದಾರೆ.