ಬೆಂಗಳೂರು: ನೂತನ ಡಿಸಿಪಿ ಡಾ. ರೋಹಿಣಿ ಕಟೋಚ್ ಸಫಟ್ ಅವರು ಇಂದು ವಿವಿ ಪುರಂ ಉಪ ವಿಭಾಗದ ವ್ಯಾಪ್ತಿಯ 152 ರೌಡಿ ಶೀಟರ್ಗಳನ್ನ ಕರೆದು ರೌಡಿಗಳ ಪರೇಡ್ ನಡೆಸಿ ಖಡಕ್ ವಾರ್ನಿಂಗ್ ನೀಡಿದರು.
ಮತ್ತೆ ರೌಡಿಗಳ ಪರೇಡ್ ನಡೆಸಿ ಖಡಕ್ ವಾರ್ನಿಂಗ್ ಕೊಟ್ಟ ಡಿಸಿಪಿ ರೋಹಿಣಿ ಕಟೋಚ್ - etv bharat
152 ರೌಡಿ ಶೀಟರ್ಗಳನ್ನ ಕರೆದು ಪರೇಡ್ ನಡೆಸದ ಡಿಸಿಪಿ ಡಾ. ರೋಹಿಣಿ ಕಟೋಚ್ ಸಫಟ್ ಅವರು ಎಲ್ಲರಿಗೂ ಮತ್ತೆ ಬಾಲ ಬಿಚ್ಚದಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಡಿಸಿಪಿ ಡಾ.ರೋಹಿಣಿ ಕಟೋಚ್ ಸಫಟ್
ಈ ರೌಡಿಗಳು ಕೊಲೆ, ಸುಲಿಗೆ, ಸರಗಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಸಿಟಿಯ ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಬಾಲ ಬಿಚ್ಚಿತ್ತಿದ್ದರು. ಹೀಗಾಗಿ ರೌಡಿ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಇಂದು ಖುದ್ದಾಗಿ ದಕ್ಷಿಣ ವಿಭಾಗ ಡಿಸಿಪಿ ರೋಹಿಣ್ ಕಟೋಚ್, ರೌಡಿಗಳಿಗಳನ್ನ ಕರೆದು ವಾರ್ನಿಂಗ್ ನೀಡಿದ್ದಾರೆ. ನೂತನ ಡಿಸಿಪಿ ಡಾ. ರೋಹಿಣಿ ಕಟೋಚ್ ಸಫಟ್ ನಿನ್ನೆ ದಕ್ಷಿಣ ವಿಭಾಗದ ರೌಡಿಗಳ ಪರೇಡ್ ನಡೆಸಿದ್ದರು.