ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ಮುಂದಿನ ಪ್ರಾಜೆಕ್ಟ್ ಯಾವುದು ಅನ್ನೋದು ಕನ್ನಡ ಚಿತ್ರರಂಗ ಅಷ್ಟೇ ಅಲ್ಲದೇ ಭಾರತೀಯ ಸಿನಿಮಾರಂಗ ಕುತೂಹಲದಿಂದ ಎದುರು ನೋಡುತ್ತಿದೆ. ಈ ಮಧ್ಯೆ ಯಶ್ ತಮ್ಮ ಕುಟುಂಬದಲ್ಲಿ ಮಕ್ಕಳ ಜೊತೆ ಕಾಲ ಕಳೆಯೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಜಿಎಫ್ ಸಿನಿಮಾಕ್ಕಾಗಿ ಉದ್ದವಾದ ಕೂದಲು ಬಿಟ್ಟು ಅದಕ್ಕೆ ಒಂದು ರೂಪ ಕೊಟ್ಟಿದ್ದ ರಾಕಿ, ಈಗ ಮತ್ತೆ ತಮ್ಮ ಕೂದಲಿಗೆ ಹೊಸ ಟಚ್ ಕೊಟ್ಟಿದ್ದಾರೆ.
ಇತ್ತೀಚೆಗೆ ಖಾಸಗಿ ಚಾನಲ್ ಸಂವಾದದಲ್ಲಿ ಯಶ್ ಭಾಗಿಯಾಗಿದ್ದರು. ಈ ಸಂವಾದ ಸೇರಿದಂತೆ aವರ ಹೇರ್ಸ್ಟೈಲ್ ಕೂಡ ವೈರಲ್ ಆಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಡೆಡ್ಲಾಕ್ಸ್ ಹೇರ್ಸ್ಟೈಲ್ದೇ ಸುದ್ದಿಯಾಗ್ತಿದೆ.