ಕರ್ನಾಟಕ

karnataka

ETV Bharat / state

ಬೆಂಗಳೂರು: ಬ್ಯಾಂಕ್‌ ಮ್ಯಾನೇಜರ್‌ಗೆ ಚಾಕು ತೋರಿಸಿ 4 ಲಕ್ಷ ಹಣದೊಂದಿಗೆ ಪರಾರಿ - ಚಾಕು ತೋರಿಸಿ ಹಣ ದರೋಡೆ ಮಾಡಿದ ಕಳ್ಳ

ಮಡಿವಾಳದ ಎಸ್​​ಬಿಐ ಬ್ಯಾಂಕಿನಲ್ಲಿ ಸಂಜೆ ಆರು ಗಂಟೆಯ ವೇಳೆ ಮ್ಯಾನೇಜರ್ ಕಾರ್ಯನಿರ್ವಹಿಸುತ್ತಿದ್ದಾಗ ಒಳ ನುಗ್ಗಿದ ಆರೋಪಿ, ಚಾಕು ತೋರಿಸಿ ಹಣ ದೋಚಿದ್ದಾನೆ.

Robbery in SBI bank at bangalore
Robbery in SBI bank at bangalore

By

Published : Jan 14, 2022, 8:40 PM IST

ಬೆಂಗಳೂರು: ಸಿನಿಮೀಯ ಶೈಲಿಯಲ್ಲಿ ಬ್ಯಾಂಕಿಗೆ‌ ನುಗ್ಗಿದ ಸುಲಿಗೆಕೋರನೊಬ್ಬ ಮ್ಯಾನೇಜರ್​ಗೆ ಚಾಕು ತೋರಿಸಿ ಬೆದರಿಸಿ ನಾಲ್ಕು ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ದೋಚಿರುವ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಡಿವಾಳದ ಎಸ್​​ಬಿಐ ಬ್ಯಾಂಕಿನಲ್ಲಿ ಸಂಜೆ ಆರು ಗಂಟೆಯ ವೇಳೆ ಮ್ಯಾನೇಜರ್ ಕಾರ್ಯನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಒಳನುಗ್ಗಿದ ಆರೋಪಿ, ಚಾಕು ತೋರಿಸಿ ಹಣ ನೀಡುವಂತೆ ತಾಕೀತು ಮಾಡಿದ್ದಾನೆ. ಕ್ಷಣಾರ್ಧದಲ್ಲಿ ಬ್ಯಾಂಕಿನಲ್ಲಿದ್ದ 4 ಲಕ್ಷ ರೂಪಾಯಿ ಹಣ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ:ಗೌಸಿಯಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನೌಕರರಿಗೆ ವಂಚನೆ: ಮಾಜಿ ಅಧ್ಯಕ್ಷನ ವಿರುದ್ಧ ಎಫ್‍ಐಆರ್

ದರೋಡೆಕೋರನ‌ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿ ಪತ್ತೆಗಾಗಿ ಮಡಿವಾಳ ವಿಭಾಗದ ಎಸಿಪಿ‌‌‌ ಸುಧೀರ್ ಹೆಗಡೆ ನೇತೃತ್ವದಲ್ಲಿ ತಂಡ ರಚಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ABOUT THE AUTHOR

...view details