ಕರ್ನಾಟಕ

karnataka

ETV Bharat / state

ಸೂಪರ್ ಮಾರ್ಕೆಟ್ ಕ್ಯಾಶಿಯರ್​​ಗೆ ಚಾಕು ಇರಿದು 7 ಲಕ್ಷ ರೂ. ದರೋಡೆ..!

ಬಂಡೆಪಾಳ್ಯ ಬಳಿಯ ಬಿಗ್ ಬಾಸ್ಕೆಟ್ ಸೂಪರ್ ಮಾರ್ಕೆಟ್ ಕ್ಯಾಷಿಯರ್​​ಗೆ ಚಾಕುವಿನಿಂದ ತಿವಿದು, ಹಗ್ಗ ಕಟ್ಟಿ 7 ಲಕ್ಷ ರೂಪಾಯಿ ದರೋಡೆ ಮಾಡಲಾಗಿದೆ.

Robbery at the supermarket
ಸೂಪರ್ ಮಾರ್ಕೆಟ್​ನಲ್ಲಿ ದರೋಡೆ

By

Published : Aug 2, 2020, 10:38 PM IST

ಬೆಂಗಳೂರು: ತರಕಾರಿ ಖರೀದಿ ಸೋಗಿನಲ್ಲಿ ಬಂದ‌‌ ಖದೀಮರು ಕ್ಯಾಶಿಯರ್​​ಗೆ ಚಾಕುವಿನಿಂದ ತಿವಿದು, ಹಗ್ಗ ಕಟ್ಟಿ 7 ಲಕ್ಷ ರೂಪಾಯಿ ಎಗರಿಸಿ ಎಸ್ಕೇಪ್ ಆಗಿರುವ ಘಟನೆ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಂಡೆಪಾಳ್ಯ ಬಳಿಯ ಬಿಗ್ ಬಾಸ್ಕೆಟ್ ಸೂಪರ್ ಮಾರ್ಕೆಟ್​ನಲ್ಲಿ ಕ್ಯಾಶಿಯರ್​​ ಆಗಿದ್ದ ಪವನ್ ಎಂಬುವರು ಚಾಕು ಇರಿತಕ್ಕೆ ಒಳಗಾಗಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್​​ ಆಗಿದ್ದಾರೆ.

ಲಾಕ್​​ಡೌನ್ ಹಿನ್ನೆಲೆಯಲ್ಲಿ ಜುಲೈ 19 ರಂದು ಸೂಪರ್ ಮಾರ್ಕೆಟ್ ರಸ್ತೆಯಲ್ಲಿ ಜನ ಸಂಚಾರ ವಿರಳವಾಗಿತ್ತು.‌ ಮಾಸ್ಕ್ ಧರಿಸಿ ಬೈಕ್​​ನಲ್ಲಿ ಮೂವರು ದರೋಡೆಕೋರರು ಗ್ರಾಹಕರ ಸೋಗಿನಲ್ಲಿ ಶಾಪ್ ಬಳಿ ಬಂದಿದ್ದಾರೆ. ಶಾಪ್​​​ನಲ್ಲಿ ಗ್ರಾಹಕರು ಇಲ್ಲದಿರುವ ವೇಳೆ ನುಗ್ಗಿದ ಆರೋಪಿಗಳು, ಕ್ಯಾಶಿಯರ್​​ ಪವನ್​​ಗೆ ಚಾಕು ಇರಿದು ಕಬೋರ್ಡ್​​ನಲ್ಲಿ ಇಟ್ಟಿದ್ದ ಏಳು ಲಕ್ಷ ರೂ. ಹಣ ಎಗರಿಸಿದ್ದಾರೆ.

ಸೂಪರ್ ಮಾರ್ಕೆಟ್​ನಲ್ಲಿ ದರೋಡೆ

ಎಸ್ಕೇಪ್ ಆಗುವಾಗ ಕ್ಯಾಶಿಯರ್​ನ ಕೈ ಕಾಲುಗಳಿಗೆ ಹಗ್ಗದಿಂದ ಕಟ್ಟಿ ಯಾರಿಗಾದರೂ ಹೇಳಿದರೆ, ಸಾಯಿಸುವುದಾಗಿ ಬೆದರಿಕೆ ಹಾಕಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ.‌ ಹಗ್ಗ ಬಿಡಿಸಿಕೊಂಡು ಶಾಪ್ ಆಚೆ ಬಂದು ಕಾಪಾಡುವಂತೆ‌ ಕ್ಯಾಶಿಯರ್​ ಕೂಗಿಕೊಂಡಿದ್ದಾರೆ. ಅವರ ಚೀರಾಟ ಕಂಡು ಶಾಪ್ ಮುಂದಿದ್ದ ಕಂಪೆನಿಯ ಆಡ್ಮಿನ್ ಆಗಿದ್ದ ಚಂದ್ರಶೇಖರ್ ಎಂಬುವರು ಸಹಾಯ ಮಾಡಿ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಶಾಪ್ ಕ್ಲೋಸ್ ಮಾಡಿಸಿ ಚಾಕು‌ ಇರಿದ್ರು..!

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಬಂಡೆಪಾಳ್ಯ ಪೊಲೀಸರು ಪರಿಶೀಲನೆ ನಡೆಸಿದ್ದು, ದರೋಡೆಕೋರರ ಚಲನವಲನಗಳ ಬಗ್ಗೆ ಸಿಸಿಟಿವಿಯಲ್ಲಿ ಸೆರೆಯಾಗಿರುವುದನ್ನು ಗಮನಿಸಿದ್ದಾರೆ. ಕೃತ್ಯ ಎಸಗುವ ಮುನ್ನ 15 ನಿಮಿಷದ ಹಿಂದೆ ಬಂದಿರುವ ಆರೋಪಿಗಳು, ಸೂಪರ್ ಮಾರ್ಕೆಟ್​​ನಲ್ಲಿ ಗ್ರಾಹಕರು ಇಲ್ಲದಿರುವ ಸಮಯಕ್ಕಾಗಿ ಕಾದು ಹೊಂಚು ಹಾಕಿ ಅನಂತರ ಶಾಪ್​​ಗೆ ಎಂಟ್ರಿ ಕೊಟ್ಟಿದ್ದಾರೆ.

ಬೈಕ್​​ನಲ್ಲಿ ಬಂದ ಮೂವರು ಸುಲಿಗೆಕೋರರು ಹೆಲ್ಮೆಟ್ ಧರಿಸಿಕೊಂಡು ಮುಖಕ್ಕೆ ಮಾಸ್ಕ್ ಹಾಕಿ ಒಳ ನುಗ್ಗಿದ್ದಾರೆ. ಬಳಿಕ ಶಟರ್ ಎಳೆದು ಕ್ಯಾಶಿಯರ್ ಮೇಲೆ ಹಲ್ಲೆ ನಡೆಸಿ ಏಳು ಲಕ್ಷ ರೂ. ಹಣ ಲಪಾಟಯಿಸಿದ್ದಾರೆ‌.‌ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

ABOUT THE AUTHOR

...view details