ಬೆಂಗಳೂರು:ರಾತ್ರಿ ಕಳ್ಳತನಕ್ಕೆ ಕೈಹಾಕುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಈಶಾನ್ಯ ವಿಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಕಳ್ಳತನಕ್ಕೆ ಇಳಿಯುವ ಖತರ್ನಾಕ್ ಕಳ್ಳರ ಬಂಧನ.. - Robbers arrested in Silicon City
ಯಲಹಂಕ ಬಳಿ ಕನ್ನ ಹಾಕಲು ಬಳಸುವ ರಾಡ್ಗಳನ್ನ ಇಟ್ಟುಕೊಂಡು ಆಟೋಗಳನ್ನ ನಿಲ್ಲಿಸಿಕೊಂಡಿದ್ದ ಕಳ್ಳರನ್ನು ಬಂಧಿಸುವಲ್ಲಿ ಈಶಾನ್ಯ ವಿಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಾಬುಜಾನ್ ಅಲಿಯಾಸ್ ಅಮೀರ್ ಖಾನ್, ವಸಂತ್ ಕುಮಾರ್, ಸೂರಿ ಅಲಿಯಾಸ್ ಸೂರ್ಯ ಬಿನ್ ಬಂಧಿತ ಆರೋಪಿಗಳು. ಈ ಆರೋಪಿಗಳು ಯಲಹಂಕ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಕನ್ನ ಹಾಕಲು ಬಳಸುವ ರಾಡ್ಗಳನ್ನ ಇಟ್ಟುಕೊಂಡು ಪುಟ್ಟೇನಹಳ್ಳಿ ಹತ್ತಿರ ಅನುಮಾನಾಸ್ಪದವಾಗಿ ಆಟೋಗಳನ್ನ ನಿಲ್ಲಿಸಿಕೊಂಡಿದ್ರು. ಪೊಲೀಸರು ಬೀಟ್ ತಿರುಗುವ ವೇಳೆ ಕಣ್ಣಿಗೆ ಬಿದ್ದು ವಿಚಾರಣೆ ನಡೆಸಿದಾಗ ಯಲಹಂಕ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಹಲವಾರು ಕೃತ್ಯದಲ್ಲಿ ಭಾಗಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಸದ್ಯ ಆರೋಪಿಗಳಿಂದ ಸುಮಾರು ₹ 3ಲಕ್ಷ ಬೆಲೆಬಾಳುವ 69ಗ್ರಾಂ ತೂಕದ ಚಿನ್ನ, ಒಂದು ಆಟೋ ರಿಕ್ಷಾ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.