ಬೆಂಗಳೂರು/ಯಲಹಂಕ: ವೇಗವಾಗಿ ಬಂದ ಬೈಕ್ವೊಂದು ಫ್ಲೈ ಓವರ್ನ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಯಲಹಂಕದ ರೈತರ ಸಂತೆ ಬಳಿ ನಡೆದಿದೆ.
ಯಲಹಂಕ ಫ್ಲೈ ಓವರ್ ಡಿವೈಡರ್ಗೆ ಗುದ್ದಿದ ಬೈಕ್.. ಇಬ್ಬರು ಸಾವು, ಓರ್ವ ಗಂಭೀರ
ಯಲಹಂಕದ ರೈತರ ಸಂತೆ ಬಳಿ ಭೀಕರ ಅಪಘಾತ ಸಂಭವಿಸಿದೆ. ಸ್ಪೀಡಾಗಿ ಬಂದ ಬೈಕ್ವೊಂದು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ಇಬ್ಬರು ಫ್ಲೈಓವರ್ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ. ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ಯಲಹಂಕ ಫ್ಲೈ ಓವರ್ ಬಳಿ ಭೀಕರ ರಸ್ತೆ ಅಪಘಾತ
ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈ ಓವರ್ನಿಂದ ಕೆಳಗೆ ಬಿದ್ದು ವಿಕ್ರಮ್ (28), ಅಮಿತ್ ಸಿಂಗ್ (27) ಸಾವನ್ನಪ್ಪಿದ್ದಾರೆ. ಸೌರಬ್ (27) ಎಂಬಾತ ಗಾಯಗೊಂಡಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ರಸ್ತೆ ಅಪಘಾತದಲ್ಲಿ ತಂದೆ ಸಾವು: ಮಗು ನಾಮಕರಣ ಖುಷಿಯಲ್ಲಿದ್ದ ಮನೆಯಲ್ಲಿ ಶೋಕ