ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಡ್ರಗ್ಸ್ ಪೆಡ್ಲರ್ ಜೊತೆ ನಂಟು ಆರೋಪದ ಮೇರೆಗೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಸೇರಿದ ಬಿಡದಿ ಮತ್ತು ಬೆಂಗಳೂರಿನ ಮನೆ ಸೇರಿದಂತೆ ವಿವಿಧ ಕಡೆಗಳಲ್ಲಿ ದಾಳಿ ಮಾಡಿ ಶೋಧ ಮುಂದುವರೆಸಿದ್ದಾರೆ. ಸದ್ಯ ರಿಕ್ಕಿಯನ್ನ ತಮ್ಮ ವಶಕ್ಕೆ ಪಡೆದ ಸಿಸಿಬಿ ಅಧಿಕಾರಿಗಳು ಬಿಡದಿಗೆ ಕರೆದೊಯ್ಯುತ್ತಿದ್ದಾರೆ.
ಸಿಸಿಬಿ ವಶದಲ್ಲಿ ಮುತ್ತಪ್ಪ ರೈ ಪುತ್ರ: ಬಿಡದಿ ಕಡೆ ಕರೆದೊಯ್ಯುತ್ತಿರುವ ಸಿಸಿಬಿ ಪೊಲೀಸರು - CCB attack
ಡ್ರಗ್ಸ್ ಪೆಡ್ಲರ್ ಜೊತೆ ನಂಟು ಆರೋಪದ ಮೇರೆಗೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈನನ್ನು ಸಿಸಿಬಿ ಪೊಲೀಸರು ಬಿಡದಿಗೆ ಕರೆದೊಯ್ಯುತ್ತಿದ್ದಾರೆ.
ಸಿಸಿಬಿ ವಶದಲ್ಲಿ ರಿಕ್ಕಿ ರೈ: ಬಿಡದಿ ಕಡೆ ಕರೆದೊಯ್ಯುತ್ತಿರುವ ಸಿಸಿಬಿ ಪೊಲೀಸರು
ಡ್ರಗ್ಸ್ ಕೇಸ್ ಮುಂದುವರೆದ ಭಾಗವಾಗಿ ನಡೆದಿರುವ ಶೋಧ ಮುಂದುವರೆದಿದ್ದು, ರಿಕ್ಕಿ ತಲೆಮರೆಸಿಕೊಂಡಿರುವ ಆದಿತ್ಯ ಆಳ್ವಾ ಜೊತೆ ಕೂಡ ನಂಟು ಹೊಂದಿದ್ದ ಎನ್ನಲಾಗುತ್ತಿದೆ. ಹೀಗಾಗಿ ಬೆಂಗಳೂರಿನ ಸದಾಶಿವನಗರ ಬಳಿಯ 7ನೇ ಅಡ್ಡ ರಸ್ತೆಯ 9ನೇ ಪ್ಲಾಟ್ ಮೇಲೆ ದಾಳಿ ಮಾಡಿ ರೇಂಜ್ ರೋವರ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ತನಿಖಾಧಿಕಾರಿಗಳಿಗೆ ಸಾಕಷ್ಟು ಸಾಕ್ಷಿ ಲಭ್ಯವಾಗಿದೆ.
ಸದ್ಯ ರಿಕ್ಕಿ ರೈ ಮೊಬೈಲ್ಅನ್ನು ವಶಕ್ಕೆ ಪಡೆದು ಬಿಡದಿಗೆ ಕರೆದೊಯ್ದಿದ್ದಾರೆ.
Last Updated : Oct 6, 2020, 11:44 AM IST