ಕರ್ನಾಟಕ

karnataka

ETV Bharat / state

370 ವಿಧಿ ರದ್ದು, ಎರಡು ದಿನ‌ ದೇಶಾದ್ಯಂತ ವಿಜಯೋತ್ಸವ: ರವಿಕುಮಾರ್ - ಕಾಶ್ಮೀರದ ವಿಶೇಷ ಸ್ಥಾನಮಾನ ತೆರವು

ಇಡೀ ದೇಶಾದ್ಯಂತ ಎಲ್ಲ ಹಳ್ಳಿಗಳಲ್ಲಿ, ಬೂತ್​ಗಳಲ್ಲಿ ,ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಎಲ್ಲ ಕಡೆ ವಿಜಯೋತ್ಸವವನ್ನು ಮಾಡಬೇಕು ಜೊತೆಗೆ ಕಾಶ್ಮೀರ ಸಮಸ್ಯೆ ತಿಳಿಸಿಕೊಡುವ ಕೆಲಸ ಕೂಡ ಮಾಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್​ ಮಾಹಿತಿ ನೀಡಿದರು.

ಎರಡು ದಿನ‌ ದೇಶಾದ್ಯಂತ ವಿಜಯೋತ್ಸವ

By

Published : Aug 6, 2019, 8:30 PM IST

ಬೆಂಗಳೂರು: ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ಸಂವಿಧಾನದ 370 ನೇ ಪರಿಚ್ಛೇದ ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿ ದೇಶಾದ್ಯಂತ ಎರಡು‌ ದಿನ ವಿಜಯೋತ್ಸವಕ್ಕೆ ಕರೆ ನೀಡಿದ್ದು, ರಾಜ್ಯದಲ್ಲಿಯೂ ವಿಜಯೋತ್ಸವ ಆಚರಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,‌ ಇಂದು ಇಡೀ ದೇಶದಾದ್ಯಂತ ಪ್ರಧಾನಿ ಮತ್ತು ಅಮಿತ್ ಶಾಗೆ ಅಭಿನಂದಿಸುವ ಸಲವಾಗಿ ಬಿಜೆಪಿ ವಿಜಯೋತ್ಸವಕ್ಕೆ ಕರೆ ನೀಡಿದೆ ಇಂದು ಸಂಜೆ ಎರಡು ದಿನಗಳ ಕಾಲ ಇಡೀ ದೇಶಾದ್ಯಂತ ಎಲ್ಲ ಹಳ್ಳಿಗಳಲ್ಲಿ, ಬೂತ್​ಗಳಲ್ಲಿ ,ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಎಲ್ಲ ಕಡೆ ವಿಜಯೋತ್ಸವ ಆಚರಿಸಬೇಕು ಜೊತೆಗೆ ಕಾಶ್ಮೀರ ಸಮಸ್ಯೆಯನ್ನು ತಿಳಿಸಿಕೊಡುವ ಕೆಲಸ ಕೂಡ ಮಾಡಬೇಕು ಎಂದು ಹೇಳಿದರು.

ಎರಡು ದಿನ‌ ದೇಶಾದ್ಯಂತ ವಿಜಯೋತ್ಸವ

ರಾಜ್ಯದಲ್ಲಿ ವಿಜಯೋತ್ಸವ:
ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ಇಂದು ಸಂಜೆಯಿಂದ ಎರಡು ದಿನಗಳ ಕಾಲ ವಿಜಯೋತ್ಸವವನ್ನು ಆಚರಿಸಲಾಗುತ್ತದೆ. ಈ ವಿಜಯೋತ್ಸವಕ್ಕೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸಾರ್ವಜನಿಕರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ABOUT THE AUTHOR

...view details