ಬೆಂಗಳೂರು: ಆರ್ಆರ್ ನಗರ ಕುರುಕ್ಷೇತ್ರದಲ್ಲಿ ಅರ್ಜುನನಾಗಿ ಮುನಿರತ್ನ ನಿಮ್ಮ ಬಳಿ ಮತ ಕೇಳಲು ಬಂದಿದ್ದಾರೆ. ಅರ್ಜುನನನ್ನು ಗೆಲ್ಲಿಸಿ ಎಂದು ಕಂದಾಯ ಸಚಿವ ಆರ್.ಅಶೋಕ್ ಮನವಿ ಮಾಡಿದರು.
ಜಾಲಹಳ್ಳಿ ಗ್ರಾಮದಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಮುನಿರತ್ನ ಹಸಿದವರಿಗೆ ಅನ್ನ ಕೊಟ್ಟರು. ಡಿ.ಕೆ.ಶಿವಕುಮಾರ್ ಕನಕಪುರದಿಂದ ಬಂದಿದ್ದಾರೆ. ಚುನಾವಣೆ ನಂತರ ಹೋಗುತ್ತಾರೆ. ಜಾತಿ-ಜಾತಿ ಅನ್ನುತ್ತಾರೆ. ಕಷ್ಟದಲ್ಲಿ ಜಾತಿ ಬರಲ್ಲ, ರೋಪ್ ಹಾಕುವವರು ನಮಗೆ ಬೇಡ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದರೆ ಅದಕ್ಕೆ ಮುನಿರತ್ನ ಕೂಡ ಕಾರಣ. ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಮುನಿರತ್ನ ಅವರ ಋಣವನ್ನು ನಾವು ತೀರಿಸಬೇಕಿದೆ ಎಂದು ಮುನಿರತ್ನ ಪರ ಮತ ಯಾಚಿಸಿದರು. ಜಾಲಹಳ್ಳಿ ರಾಮಯ್ಯನ ಮಗ ಅಶೋಕ ಅಂತ ವಿಧಾನಸೌಧದಲ್ಲಿ ಭಾಷಣ ಮಾಡಿದ್ದೆ. ಹೆಚ್.ಎಂ.ಡಿ ವಾರ್ಡ್ನಿಂದ ಇಲ್ಲಿವರೆಗೂ ಮೆರವಣಿಗೆ ಮಾಡಿದ್ದರು ಎಂದು ನೆನಪಿನ ಬುತ್ತಿಬಿಚ್ಚಿಟ್ಟರು.