ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ: ಶಾಸಕರ ಭವನದಲ್ಲಿ ನಿರ್ಬಂಧ; ಎಲ್ಲಾ ಸಿಬ್ಬಂದಿಗೆ ಕೋವಿಡ್ -19 ಪರೀಕ್ಷೆ - ಬೆಂಗಳೂರು ಶಾಸಕರ ಭವನ ಲೇಟೆಸ್ಟ್​ ನ್ಯೂಸ್​

ಶಾಸಕರ ಭವನಕ್ಕೆ ಶಾಸಕರೊಂದಿಗೆ ಅವರ ಆಪ್ತ ಸಹಾಯಕ, ವಾಹನ ಚಾಲಕ, ಅಂಗರಕ್ಷಕರು ಸೇರಿ ಕೇವಲ ನಾಲ್ಕು ಮಂದಿಗೆ ಸೀಮಿತಗೊಂಡು ಪ್ರವೇಶವನ್ನು ನಿಗದಿಗೊಳಿಸಲಾಗಿದೆ.

Restriction Karnataka Legislative Assembly
ಶಾಸಕರ ಭವನದಲ್ಲಿ ನಿರ್ಬಂಧ

By

Published : Jun 25, 2020, 6:29 PM IST

ಬೆಂಗಳೂರು: ಶಾಸಕರ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಹಿನ್ನೆಲೆ ಕೆಲ ‌ನಿರ್ಬಂಧಗಳನ್ನು ಹೇರಲಾಗಿದೆ.

ಶಾಸಕರ ಭವನದಲ್ಲಿ ನಿರ್ಬಂಧ

ಈ ಸಂಬಂಧ ಇಂದು ವಿಧಾನಪರಿಷತ್ ಸಭಾಪತಿ ಮತ್ತು ವಿಧಾನಸಭೆ ಸಭಾಧ್ಯಕ್ಷರ ಜಂಟಿ ಅಧ್ಯಕ್ಷತೆಯಲ್ಲಿ, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಹಾಗೂ ಪೊಲೀಸ್ ಆಯುಕ್ತರ ಜೊತೆ ನಡೆಸಿದ ಸಭೆಯಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ನಿಯಂತ್ರಿಸುವ ನಿಟ್ಟಿನಲ್ಲಿ ಕೆಲ ನಿರ್ಬಂಧಗಳನ್ನು ಹೇರಲು ತೀರ್ಮಾನಿಸಲಾಗಿದೆ.

ಶಾಸಕರ ಭವನದ ಕಟ್ಟಡಗಳಿಗೆ ತುರ್ತು ಸೋಂಕು ನಿವಾರಣಾ ಔಷಧಿ ಸಿಂಪಡಿಸಲು ನಿರ್ಧರಿಸಲಾಗಿದೆ. ಶಾಸಕರ ಭವನ ಮುಂದಿನ ದ್ವಾರದಲ್ಲಿ ಶಾಸಕರ ಭವನಕ್ಕೆ ಪ್ರವೇಶಿಸುವವರು ಕಡ್ಡಾಯವಾಗಿ ತಮ್ಮ ಹೆಸರು, ಮೊಬೈಲ್ ಸಂಖ್ಯೆಯೊಂದಿಗೆ ಭೇಟಿಯಾಗುವ ಉದ್ದೇಶವನ್ನು ದಾಖಲಿಸಿಕೊಳ್ಳಬೇಕು ಮತ್ತು ಕಡ್ಡಾಯವಾಗಿ ಪ್ರಾಥಮಿಕ ವೈದ್ಯಕೀಯ ತಪಾಸಣೆಗೊಳಗಾಗಬೇಕು.

ಶಾಸಕರ ಭವನದ ಆವರಣದಲ್ಲಿ ಶಾಸಕರ ವಾಹನಗಳಿಗೆ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಸೀಮಿತಗೊಳಿಸಲಾಗಿದೆ. ಶಾಸಕರ ಭವನದ ಎಲ್ಲಾ ಸಿಬ್ಬಂದಿಗೆ ಕೊವಿಡ್-19 ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದೆ.

ಅಲ್ಲದೆ ಶಾಸಕರ ಭವನದಲ್ಲಿ ಶಾಸಕರ ಹೊರತಾಗಿ ತಂಗಿರುವವರ ವಿವರಗಳನ್ನು ಪಡೆದು, ಅನಗತ್ಯವಾಗಿ ತಂಗಿರುವವರನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ವಿಧಾನ ಮಂಡಲದ ಸಮಿತಿಗಳ ಸಭೆಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು, ಅಧಿಕಾರಿಗಳ ಸಂಖ್ಯೆಗಳನ್ನು ಅಗತ್ಯಕ್ಕೆ ತಕ್ಕಂತೆ ಸೀಮಿತಗೊಳಿಸಿ, ಸಭೆ ನಡೆಸಲು ಎಲ್ಲಾ ಸಮಿತಿ ಅಧ್ಯಕ್ಷರುಗಳಿಗೆ ತಿಳಿಸಲು ತೀರ್ಮಾನಿಸಲಾಗಿದೆ.

ABOUT THE AUTHOR

...view details