ಕರ್ನಾಟಕ

karnataka

ETV Bharat / state

'ಗೋಹತ್ಯೆ ನಿಷೇಧ, ಲವ್ ಜಿಹಾದ್ ತಡೆ ವಿರೋಧಿಸುವವರು ದೇಶದ್ರೋಹಿಗಳು'

ನಾನು ಅಲ್ಪಸಂಖ್ಯಾತರ ವಿರೋಧಿಯಲ್ಲ. ಲವ್ ಜಿಹಾದ್ ಹೆಸರಿನಲ್ಲಿ ಕಾಂಗ್ರೆಸ್​ನವರ ಮನೆಯಲ್ಲಿ ಮೋಸ ನಡೆದರೆ ನೋವು ಗೊತ್ತಾಗುತ್ತದೆ. ಗೋಹತ್ಯೆ ನಿಷೇಧ ಬಿಲ್ ಪಾಸ್ ಮಾಡುತ್ತೇವೆ. ಗೋವು ನಮಗೆ ತಾಯಿ ಇದ್ದ ಹಾಗೆ. ಲವ್ ಜಿಹಾದ್, ಗೋಹತ್ಯೆ ಕಾನೂನು ನಿಷೇಧ ವಿರೋಧಿಸುವರು ದೇಶದ್ರೋಹಿಗಳು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.

ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ
ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ

By

Published : Dec 9, 2020, 2:07 PM IST

Updated : Dec 9, 2020, 3:37 PM IST

ಬೆಂಗಳೂರು:ಭಾರತಾಂಬೆಯ ಮಕ್ಕಳಾಗಿದ್ರೆ, ಹಿಂದುತ್ವದ ಪರವಾಗಿದ್ರೆ ಗೋಹತ್ಯೆ ನಿಷೇಧ, ಲವ್ ಜಿಹಾದ್ ತಡೆ ಮಸೂದೆ ಬೆಂಬಲಿಸಿ, ಇಲ್ಲದಿದ್ದರೆ ನೀವು ದೇಶದ್ರೋಹಿಗಳು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ‌ ಮಾತನಾಡಿದ ಅವರು, ನಾನು ಅಲ್ಪಸಂಖ್ಯಾತರ ವಿರೋಧಿಯಲ್ಲ. ಲವ್ ಜಿಹಾದ್ ಹೆಸರಿನಲ್ಲಿ ಕಾಂಗ್ರೆಸ್​ನವರ ಮನೆಯಲ್ಲಿ ಮೋಸ ನಡೆದರೆ ನೋವು ಗೊತ್ತಾಗುತ್ತದೆ. ಗೋಹತ್ಯೆ ನಿಷೇಧ ಬಿಲ್ ಪಾಸ್ ಮಾಡುತ್ತೇವೆ. ಗೋವು ನಮಗೆ ತಾಯಿ ಇದ್ದ ಹಾಗೆ. ಲವ್ ಜಿಹಾದ್, ಗೋಹತ್ಯೆ ಕಾನೂನು ನಿಷೇಧ ವಿರೋಧಿಸುವರು ದೇಶದ್ರೋಹಿಗಳು, ಭಯೋತ್ಪಾದಕರು ಎಂದು ಕಿಡಿಕಾರಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ

ಬಿಜೆಪಿಗೆ ಜೆಡಿಎಸ್​ ಬಿ ಟೀಮ್ ಅಲ್ಲ. ಜೆಡಿಎಸ್​ನವರಿಗೆ ಆತ್ಮವಲೋಕನದ ಸಮಯ ಇದು. 2004ರಲ್ಲಿ ಕಾಂಗ್ರೆಸ್ ಬೆಂಬಲ ಕೊಟ್ಟು ಎಡವಟ್ಟು ಮಾಡಿಕೊಂಡ್ರು. ಆ ನಂತರ ಬಿಜೆಪಿಗೆ ಬೆಂಬಲ ಕೊಟ್ಟಿದ್ದು ಹೆಚ್​ಡಿಕೆಗೆ ಮರುಜೀವ ಕೊಡ್ತು. ಮತ್ತೆ ಬಿಜೆಪಿಗೆ ಯಡಿಯೂರಪ್ಪಗೆ ಮೋಸ ಮಾಡಿದ್ರು. ಆ ಶಾಪ ಜೆಡಿಎಸ್​ಗೆ ಈಗ ತಟ್ಟಿರಬಹುದು. ಆದ್ದರಿಂದ ಜೆಡಿಎಸ್ 30-35 ಸೀಟಿಗೆ ಕುಸಿದಿದೆ. ಅವರಿಗೆ ಈಗ ಬಿಜೆಪಿ ಜೊತೆಗಿದ್ರೆ ಗೌರವ ಹೆಚ್ಚಾಗುತ್ತೆ ಅಂತ ಅನ್ನಿಸಿದೆ ಎಂದರು.

ಸಿದ್ದರಾಮಯ್ಯ, ಕಾಂಗ್ರೆಸ್ ಯಾವ ರೀತಿ ಜೆಡಿಎಸ್​ ಅನ್ನು ಒಡೆದು ಆಳುತ್ತಿದೆ ಅನ್ನುವುದನ್ನ ಅರ್ಥಮಾಡಿಕೊಳ್ಳಬೇಕು. ಅವರು ಕಾಂಗ್ರೆಸ್ ಜೊತೆ ಇನ್ನೂ ಮುಂದುವರೆದ್ರೆ ಪಕ್ಷವೇ ಮುಳುಗುತ್ತದೆ. ಇದೊಂದು ಸುಸಂದರ್ಭ ಅವರಿಗೆ, ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಓದಿ:'ವಿರೋಧಕ್ಕೆ ಮಾತ್ರ ವಿರೋಧ ಪಕ್ಷವಲ್ಲ,ಜೆಡಿಎಸ್ ಈ ಮಣ್ಣಿಗೆ ಎಂದೂ ದ್ರೋಹ ಮಾಡಲ್ಲ'

ರೈತರ ಬಗ್ಗೆ ಮಾತಾಡುವ ಹಕ್ಕು ಕಾಂಗ್ರೆಸ್, ಜೆಡಿಎಸ್​ಗಿಲ್ಲ. ಪ್ರಧಾನಿ ರೈತಪರ ಯೋಜನೆಗಳನ್ನು ತಂದಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯದಲ್ಲಿ ರೈತರ ಆತ್ಮಹತ್ಯೆಯಾಗಿದೆ. ಆವಾಗ ಸಿದ್ದರಾಮಯ್ಯ ಯಾವ ರೈತರ ಮನೆಗಳಿಗೂ ಭೇಟಿ ನೀಡಿಲ್ಲ. ರಾಹುಲ್ ಗಾಂಧಿ ಚೆಕ್ ಕೊಟ್ರು,‌ ಎಲ್ಲಾ ನಕಲಿ. ಕಾಂಗ್ರೆಸ್ ನಕಲಿ ಪಕ್ಷ ಎಂದು ಕಿಡಿ‌ಕಾರಿದರು. ಕಾಂಗ್ರೆಸ್ ಜೆಡಿಎಸ್ ಯಾವಾಗ ಲವ್ ಮಾಡ್ತಾರೆ, ಯಾವಾಗ ಮದ್ವೆ ಆಗುತ್ತೆ, ಯಾವಾಗ ತಾಳಿ ಕಟ್ತಾರೆ, ಯಾವಾಗ ಡೈವೋರ್ಸ್ ಆಗ್ತಾರೆ ಅವರಿಗೇ ಗೊತ್ತು ಎಂದು ಟಾಂಗ್ ನೀಡಿದರು.

Last Updated : Dec 9, 2020, 3:37 PM IST

ABOUT THE AUTHOR

...view details