ಕರ್ನಾಟಕ

karnataka

ETV Bharat / state

ದೆಹಲಿ ಫಲಿತಾಂಶ ಬರೀ ಪ್ರಚಾರಕ್ಕೆ ಸಿಕ್ಕ ಮನ್ನಣೆ: ರೇಣುಕಾಚಾರ್ಯ ಟೀಕೆ - ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್ ಅವರ ಪ್ರಚಾರ ಕಾರ್ಯಕ್ಕೆ ಮನ್ನಣೆ

ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿ ಅವರ ಶಾಶ್ವತ ಯೋಜನೆಗಳ ಬದಲು ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್ ಅವರ ಪ್ರಚಾರ ಕಾರ್ಯಕ್ಕೆ ಮನ್ನಣೆ ನೀಡಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ‌ ರೇಣುಕಾಚಾರ್ಯ ಹೇಳಿದ್ದಾರೆ.

renukacharya-reaction-about-delhi-election-in-bengalore
ಎಂ.ಪಿ‌ ರೇಣುಕಾಚಾರ್ಯ

By

Published : Feb 11, 2020, 5:10 PM IST

ಬೆಂಗಳೂರು:ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿ ಅವರ ಶಾಶ್ವತ ಯೋಜನೆಗಳ ಬದಲು ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್ ಅವರ ಪ್ರಚಾರಕ್ಕೆ ಮನ್ನಣೆ ನೀಡಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ‌ ರೇಣುಕಾಚಾರ್ಯ ಹೇಳಿದ್ದಾರೆ.

ಎಂ.ಪಿ‌ ರೇಣುಕಾಚಾರ್ಯ

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ‌ ಸಿಎಂ ಕೇಜ್ರಿವಾಲ್ ಬರೀ ಪ್ರಚಾರ ಕಾರ್ಯಕ್ರಮ ಮಾಡಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಶಾಶ್ವತವಾದ ಯೋಜನೆಗಳನ್ನು ಕೊಟ್ಟಿದ್ದಾರೆ. ಆದರೆ ಇಲ್ಲಿ ಕೇವಲ ತಾತ್ಕಾಲಿಕ ಕಾರ್ಯಕ್ರಮಗಳು, ಪ್ರಚಾರದ ಕಾರ್ಯಕ್ರಮಗಳಿಗೆ ಎಲ್ಲೋ ಒಂದು ಕಡೆ ಮುನ್ನಡೆ ಸಿಕ್ಕಿದೆ ಆದರೂ ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು‌ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಎಲ್ಲಾ ಪಾತ್ರ ಮಾಡುವಲ್ಲಿ ನಿಪುಣರು, ಸಂಘ ಪರಿವಾರದ ಬಗ್ಗೆ ಅಷ್ಟು ಕಾಳಜಿ ಇದ್ದರೆ ಬರೀ ಊಟೋಪಚಾರ ಮಾತ್ರವಲ್ಲ ಗಣ ವೇಶವನ್ನೂ ಕೊಡಲಿ ಎಂದು ಟಾಂಗ್ ನೀಡಿದ್ರು.

ABOUT THE AUTHOR

...view details